More

    ಹಾಲಿ ಚಾಂಪಿಯನ್ ಇಂಗ್ಲೆಂಡ್​ ಸೆಮೀಸ್​ ಹಾದಿ ದುರ್ಗಮ; ಇನ್ನು ಪ್ರತಿ ಪಂದ್ಯವೂ ಕ್ವಾರ್ಟರ್​ಫೈನಲ್​!

    ಬೆಂಗಳೂರು: ಹಾಲಿ ಚಾಂಪಿಯನ್​ ಆಗಿ ಅಭಿಯಾನ ಆರಂಭಿಸಿರುವ ಇಂಗ್ಲೆಂಡ್​ ತಂಡ ಆಡಿದ ಮೊದಲ 4 ಪಂದ್ಯಗಳಲ್ಲಿ 3ರಲ್ಲಿ ಸೋತು ತೀವ್ರ ಇಕ್ಕಟ್ಟಿಗೆ ಸಿಲುಕಿದೆ. ಕೇವಲ ಒಂದು ಪಂದ್ಯದಲ್ಲಷ್ಟೇ (ಬಾಂಗ್ಲಾ ವಿರುದ್ಧ) ಗೆದ್ದಿರುವ ಜೋಸ್​ ಬಟ್ಲರ್​ ಬಳಗ, ನ್ಯೂಜಿಲೆಂಡ್​, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಭಾರಿ ಅಂತರದಿಂದ ಸೋತಿದೆ. ಇದರಿಂದ ಆಂಗ್ಲರ ರನ್​ರೇಟ್​ (-1.250) ಕೂಡ ಭಾರಿ ಕುಸಿತ ಕಂಡಿದ್ದು, ಸದ್ಯ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ 229 ರನ್​ಗಳಿಂದ ಸೋತಿದ್ದ ಇಂಗ್ಲೆಂಡ್​, ಇನ್ನೂ 2 ರನ್​ ಹೆಚ್ಚು ಅಂತರದಿಂದ ಸೋತಿದ್ದರೆ ಈಗ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುತ್ತಿತ್ತು!

    ಸೆಮೀಸ್​ ಹಾದಿ ಹೀಗಿದೆ: ಇಂಗ್ಲೆಂಡ್​ ತಂಡಕ್ಕೆ ಇನ್ನು ವಿಶ್ವಕಪ್​ ಲೀಗ್​ ಹಂತದಲ್ಲಿ 5 ಪಂದ್ಯಗಳು ಬಾಕಿ ಉಳಿದಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ಆಸೆಯನ್ನು ಜೀವಂತ ಇಟ್ಟುಕೊಳ್ಳಬೇಕಾದರೆ ಇನ್ನು ಪ್ರತಿ ಪಂದ್ಯವನ್ನೂ ಗೆಲ್ಲಬೇಕಾಗುತ್ತದೆ. ಸದ್ಯ ಇಂಗ್ಲೆಂಡ್​ಗೆ ಗರಿಷ್ಠ 12 ಅಂಕ ಕಲೆಹಾಕುವ ಅವಕಾಶವಿದ್ದು, ಇದರಿಂದ 3 ಅಥವಾ 4ನೇ ಸ್ಥಾನದೊಂದಿಗೆ ಸೆಮಿಫೈನಲ್​ಗೇರಬಹುದಾಗಿದೆ. ಆದರೆ ಇದೇ ವೇಳೆ ಅದರ ರನ್​ರೇಟ್​ ಕೂಡ ಭಾರಿ ಸುಧಾರಣೆ ಕಾಣಬೇಕಾದ ಅಗತ್ಯವಿದೆ.

    ಆಂಗ್ಲರ ಮುಂದಿನ 5 ಎದುರಾಳಿಗಳೆಂದರೆ ಶ್ರೀಲಂಕಾ (ಅ.26, ಬೆಂಗಳೂರು), ಭಾರತ (ಅ.29, ಲಖನೌ), ಆಸ್ಟ್ರೆಲಿಯಾ (ನ.4, ಅಹಮದಾಬಾದ್​), ನೆದರ್ಲೆಂಡ್​ (ನ. 8, ಪುಣೆ), ಪಾಕಿಸ್ತಾನ (ನ. 11, ಕೋಲ್ಕತ). ಈ ಐದು ಪಂದ್ಯಗಳೂ ಇಂಗ್ಲೆಂಡ್​ಗೆ “ಕ್ವಾರ್ಟರ್​ಫೈನಲ್​’ ಆಗಿದ್ದು, ಇದರಲ್ಲಿ ಒಂದರಲ್ಲಿ ಸೋತರೂ ಹೊಸ ಚಾಂಪಿಯನ್​ಗೆ ದಾರಿ ಬಿಟ್ಟುಕೊಡಬೇಕಾಗುತ್ತದೆ.

    *ನಮಗಿನ್ನು ಸೆಮಿಫೈನಲ್​ಗೇರುವುದು ಬಹಳ ಕಠಿಣವಾಗಿದೆ. ಆದರೆ ನಾವು ನಂಬಿಕೆ ಕಳೆದುಕೊಳ್ಳುವುದಿಲ್ಲ. ಟೂರ್ನಿಯಲ್ಲಿ ಇನ್ನು ನಾವು ಯಾವುದೇ  ತಪ್ಪು ಮಾಡಲು ಅವಕಾಶವಿಲ್ಲ. ಈ ಪರಿಸ್ಥಿತಿಯಿಂದ ಹೊರಬರಲು ಸೂಕ್ತ ಯೋಜನೆ ರೂಪಿಸುತ್ತೇವೆ.
    | ಜೋಸ್​ ಬಟ್ಲರ್​, ಇಂಗ್ಲೆಂಡ್​ ನಾಯಕ

    ಟಾಪ್ಲೆ ಔಟ್​, ಆರ್ಚರ್​ ಇನ್​?
    ಮೊದಲ 4 ಪಂದ್ಯಗಳಲ್ಲಿ ಇಂಗ್ಲೆಂಡ್​ ಪರ ಗರಿಷ್ಠ 8 ವಿಕೆಟ್​ ಕಬಳಿಸಿದ ಬೌಲರ್​ ಎನಿಸಿರುವ ವೇಗಿ ರೀಸ್​ ಟಾಪ್ಲೆ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಕೈಬೆರಳು ಮುರಿತಕ್ಕೆ ಒಳಗಾಗಿದ್ದು ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಪ್ರಮುಖ ವೇಗಿ ಜೋಫ್ರಾ ಆರ್ಚರ್​ರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಇಂಗ್ಲೆಂಡ್​ ಚಿಂತನೆ ನಡೆಸಿದೆ. ಫಿಟ್ನೆಸ್​ ಸಮಸ್ಯೆಯಿಂದಾಗಿ ಆರ್ಚರ್​ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಇದೀಗ ಬಹುತೇಕ ಫಿಟ್​ ಆಗಿರುವ ಆರ್ಚರ್​ ಕಳೆದ ವಾರ ಮುಂಬೈನಲ್ಲಿ ತಂಡವನ್ನು ಕೂಡಿಕೊಂಡಿದ್ದಾರೆ. ಮತ್ತೊಂದೆಡೆ ಆಲ್ರೌಂಡರ್​ ಲಿಯಾಮ್​ ಡಾಸನ್​, ಬ್ಯಾಟರ್​ ಜೇಸನ್​ ರಾಯ್​, ಬೆನ್​ ಡಕೆಟ್​ ಕೂಡ ಟಾಪ್ಲೆ ಸ್ಥಾನ ತುಂಬುವ ರೇಸ್​ನಲ್ಲಿದ್ದಾರೆ ಎನ್ನಲಾಗಿದೆ.

    VIDEO| ಸಿಂಧುಗೆ ಮತ್ತೆ ಸೆಮೀಸ್​ನಲ್ಲಿ ಶಾಕ್​; ಮರಿನ್​ ಜತೆ ಮಾತಿನ ಚಕಮಕಿಗೆ ಹಳದಿ ಕಾರ್ಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts