ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಗೆದ್ದ ಅನನುಭವಿಗಳ ಬಳಗವನ್ನು ಶ್ಲಾಘಿಸಿದ ಕೆಎಲ್​ ರಾಹುಲ್​

ind vs sa web
Published on

ಪಾರ್ಲ್​: ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಏಕದಿನ ಸರಣಿ ಗೆಲುವು ದಾಖಲಿಸಿದ ಭಾರತದ ಅನನುಭವಿ ಆಟಗಾರರ ಬಳಗವನ್ನು ಹಂಗಾಮಿ ನಾಯಕ ಕೆಎಲ್​ ರಾಹುಲ್​ ಶ್ಲಾಘಿಸಿದ್ದಾರೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದ ನಿರ್ಣಾಯಕ 3ನೇ ಏಕದಿನ ಪಂದ್ಯದಲ್ಲಿ 76 ರನ್​ಗಳಿಂದ ಜಯಿಸಿದ ಯುವ ಭಾರತ, 2-1ರಿಂದ ಸರಣಿ ಜಯಿಸಿತು. ಇದು ಹರಿಣಗಳ ನೆಲದಲ್ಲಿ ಭಾರತದ 2ನೇ ಏಕದಿನ ಸರಣಿ ಜಯವಾಗಿದೆ. 2018ರಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿತ್ತು.

"ಎಲ್ಲರೂ ಉತ್ತಮ ನಿರ್ವಹಣೆ ತೋರಿದ್ದು ನೋಡಿ ಖುಷಿಯಾಯಿತು. ಸರಣಿಯುದ್ದಕ್ಕೂ ಹೋರಾಟ ತೋರಿದೆವು. ಆರಂಭದಲ್ಲಿ ಕೆಲವರು ಸ್ವಲ್ಪ ನರ್ವಸ್​ ಆಗಿದ್ದರು. ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ ಒತ್ತಡಕ್ಕೆ ಒಗ್ಗಿಕೊಂಡರು' ಎಂದ ರಾಹುಲ್​, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು 8 ವರ್ಷಗಳ ಬಳಿಕ ಚೊಚ್ಚಲ ಶತಕ ಸಿಡಿಸಿದ ಸಂಜು ಸ್ಯಾಮ್ಸನ್​ರನ್ನು ವಿಶೇಷವಾಗಿ ಪ್ರಶಂಸಿಸಿದರು.

ಸಂಜು ಸ್ಯಾಮ್ಸನ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಸರಣಿಯ 3 ಪಂದ್ಯಗಳಲ್ಲಿ 10 ವಿಕೆಟ್​ ಕಬಳಿಸಿ ಮಿಂಚಿದ ಎಡಗೈ ವೇಗಿ ಅರ್ಷದೀಪ್​ ಸಿಂಗ್​ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net