ಕೇವಲ 5 ಲಕ್ಷ ಜನಸಂಖ್ಯೆಯ ಪುಟ್ಟದೇಶ ಕೇಪ್​ ವರ್ಡೆಗೆ ಫಿಫಾ ವಿಶ್ವಕಪ್​ ಅರ್ಹತೆ

web fifa
Published on

ಪ್ರಯಾ (ಕೇಪ್​ ವರ್ಡೆ): ಪಶ್ಚಿಮ ಆಫ್ರಿಕಾದ ಕೇವಲ 5.25 ಲಕ್ಷ ಜನಸಂಖ್ಯೆಯ ದ್ವೀಪರಾಷ್ಟ್ರ ಕೇಪ್​ ವರ್ಡೆ ಮೊಟ್ಟಮೊದಲ ಬಾರಿಗೆ ಫಿಫಾ ವಿಶ್ವಕಪ್​ ಟೂರ್ನಿಗೆ ಅರ್ಹತೆ ಸಂಪಾದಿಸಿದೆ. 2026ರ ವಿಶ್ವಕಪ್ ಫುಟ್​ಬಾಲ್​ ಅರ್ಹತಾ ಪಂದ್ಯದಲ್ಲಿ ಎಸ್ವತಿನಿ ವಿರುದ್ಧ 3-0 ಗೋಲುಗಳಿಂದ ಜಯಿಸುವ ಮೂಲಕ ಕೇಪ್​ ವರ್ಡೆ ಈ ಸಾಧನೆ ಮಾಡಿದೆ. ಈ ಪಂದ್ಯ ವೀಕ್ಷಿಸುವ ಸಲುವಾಗಿ ಕೇಪ್​ ವರ್ಡೆ ದೇಶದ ಜನರಿಗೆ ಸರ್ಕಾರ ಅರ್ಧದಿನ ರಜೆ ಘೋಷಣೆ ಮಾಡಿತ್ತು.

ಕೇಪ್​ ವರ್ಡೆ ಫಿಫಾ ವಿಶ್ವಕಪ್​ ಅರ್ಹತೆ ಪಡೆದ 2ನೇ ಅತಿಸಣ್ಣ ದೇಶವೆನಿಸಿದೆ. 2018ರಲ್ಲಿ 3.5 ಲಕ್ಷ ಜನಸಂಖ್ಯೆಯ ಐಸ್​ಲ್ಯಾಂಡ್​ ವಿಶ್ವಕಪ್​ ಅರ್ಹತೆ ಪಡೆದ ಪುಟ್ಟದೇಶ ಎನಿಸಿತ್ತು. 4,033 ಚದರ ಕಿಲೋಮೀಟರ್​ ವ್ಯಾಪ್ತಿ ಹೊಂದಿರುವ ಕೇಪ್​ ವರ್ಡೆ, 50 ವರ್ಷಗಳ ಹಿಂದೆ ಪೋರ್ಚುಗಲ್​ನಿಂದ ಸ್ವಾತಂತ್ರ್ಯ ಪಡೆದುಕೊಂಡಿತ್ತು.

ಫಿಫಾ ರ್ಯಾಂಕಿಂಗ್​ನಲ್ಲಿ 70ನೇ ಸ್ಥಾನದಲ್ಲಿರುವ ಕೇಪ್​ ವರ್ಡೆ, 2026ರ ಫಿಫಾ ವಿಶ್ವಕಪ್​ನಲ್ಲಿ ಆಡಲಿರುವ 48 ದೇಶಗಳ ಪೈಕಿ ಈಗಾಗಲೆ ಅರ್ಹತೆ ಖಚಿತಪಡಿಸಿಕೊಂಡಿರುವ 22ನೇ ತಂಡವೆನಿಸಿದೆ. ಆಫ್ರಿಕಾ ಖಂಡದಿಂದ 6ನೇ ತಂಡವಾಗಿ ಅರ್ಹತೆ ಖಚಿತಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net