ಐಸಿಸಿ ಮಹಿಳಾ ಏಕದಿನ ವಿಶ್ವಕಪ್​: ನ್ಯೂಜಿಲೆಂಡ್​ಗೆ ಮೊದಲ ಗೆಲುವು

web wwc
Published on

ಗುವಾಹಟಿ: ನಾಯಕಿ ಸೋಫಿ ಡಿವೈನ್​ (63 ರನ್​, 85 ಎಸೆತ, 2 ಬೌಂಡರಿ, 2 ಸಿಕ್ಸರ್​) ಹಾಗೂ ಬ್ರೂಕ್​ ಹಾಲಿ ಡೇ (69 ರನ್​, 104 ಎಸೆತ, 5 ಬೌಂಡರಿ, 1 ಸಿಕ್ಸರ್​) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್​ ತಂಡ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ಎದುರು 100 ರನ್​ಗಳ ಗೆಲುವು ದಾಖಲಿಸಿದೆ. ಹಾಲಿ ಟಿ20 ವಿಶ್ವ ಚಾಂಪಿಯನ್ನರಿಗೆ ಟೂರ್ನಿಯ ಮೊದಲ ಜಯ ಇದಾಗಿದೆ.

ರ್ಬಸಾಪುರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ನ್ಯೂಜಿಲೆಂಡ್​, 38 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿತು. ಆಗ ಡಿವೈನ್​- ಹಾಲಿ ಡೇ ನಡೆಸಿದ ಜತೆಯಾಟದ ಬಲದಿಂದ 9 ವಿಕೆಟ್​ಗೆ 227 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ 66 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡ ಬಾಂಗ್ಲಾದೇಶ ಸೋಲಿನ ಹಾದಿ ಹಿಡಿಯಿತು. ಅಂತಿಮವಾಗಿ 39.5 ಓವರ್​ಗಳಲ್ಲಿ 127 ರನ್​ಗಳಿಗೆ ಸರ್ವಪತನ ಕಂಡಿತು.

ನ್ಯೂಜಿಲೆಂಡ್​: 9 ವಿಕೆಟ್​ಗೆ 227 (ಸೂಜಿ ಬೇಟ್ಸ್​ 29, ಪಿಲ್ಮಿರ್​ 4, ಅಮೆಲಿಯಾ 1, ಸೋಫಿ ಡಿವೈನ್​ 63, ಬ್ರೂಕ್​ ಹಾಲಿ ಡೇ 69, ಗ್ರೀನ್​ 25, ಇಸಾಬೆಲ್ಲಾ 12, ತಹುಹು 12*, ರಬೀಯಾ 30ಕ್ಕೆ 3). ಬಾಂಗ್ಲಾದೇಶ: 39.5 ಓವರ್​ಗಳಲ್ಲಿ 127 (ರುಬಯಾ 4, ಶರ್ಮಿನ್​ 3, ನೀಗರ್​ 4, ಶೋಭನಾ 2, ಹೀಮಾ 34 ಶೋರ್ನ 1, ನಹೀದಾ 17, ರಬೀಯಾ 25, ಜೆಸ್​ ಕೆರ್​ 21ಕ್ಕೆ 3, ತಹುಹು 22ಕ್ಕೆ 3, ರೋಸ್​ಮೇರಿ 20ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net