

ವಿಶಾಖಪಟ್ಟಣ: ವಿಕೆಟ್ ಕೀಪರ್-ಬ್ಯಾಟುಗಾರ್ತಿ ರಿಚಾ ಘೋಷ್ (94 ರನ್, 77 ಎಸೆತ, 11 ಬೌಂಡರಿ, 4 ಸಿಕ್ಸರ್) ದಿಟ್ಟ ಬ್ಯಾಟಿಂಗ್ ನಡುವೆಯೂ ಆತಿಥೇಯ ಭಾರತ ತಂಡ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್ನ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 3 ವಿಕೆಟ್ಗಳಿಂದ ಸೋಲಿನ ಆಘಾತ ಎದುರಿಸಿದೆ. ಹರ್ಮಾನ್ಪ್ರೀತ್ ಕೌರ್ ಬಳಗಕ್ಕೆ ಇದು ಟೂರ್ನಿಯಲ್ಲಿ ಮೊದಲ ಸೋಲಾಗಿದೆ.
ವೈಎಸ್ಆರ್ ರೆಡ್ಡಿ ಕ್ರೀಡಾಂಗಣದಲ್ಲಿ ಗುರುವಾರ ಮಳೆಯಿಂದ ಒಂದು ಗಂಟೆ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ತಂಡಕ್ಕೆ ಅಗ್ರ ಕ್ರಮಾಂಕ ಕೈಕೊಟ್ಟಿತು. ಆಗ ರಿಚಾ ಘೋಷ್ ಹಾಗೂ ಸ್ನೇಹಾ ರಾಣಾ (33) ನಡೆಸಿದ ಉಪಯುಕ್ತ ಜತೆಯಾಟದ ನಡುವೆ ಭಾರತ 49.4 ಓವರ್ಗಳಲ್ಲಿ 251 ರನ್ಗಳಿಗೆ ಆಲೌಟ್ ಆಯಿತು. ಕೊನೇ 9 ಓವರ್ಗಳಲ್ಲಿ ಭಾರತ 97 ರನ್ ಕಲೆಹಾಕಿತು. ಪ್ರತಿಯಾಗಿ ಹರಿಣಗಳಿಗೂ ಆರಂಭಿಕ ಆಘಾತ ನೀಡಿದ ಭಾರತ, 81 ರನ್ಗಳಿಗೆ 5 ವಿಕೆಟ್ ಕಬಳಿಸಿತು. ಆದರೆ ನಾಯಕಿ ಲೌರಾ ವೊಲ್ವಾರ್ಡ್ (70 ರನ್, 111 ಎಸೆತ, 8 ಬೌಂಡರಿ), ಕ್ಲೋಯ್ ಟ್ರಯಾನ್ (49 ರನ್, 66 ಎಸೆತ, 5 ಬೌಂಡರಿ), ನಾಡಿನ್ ಡಿ ಕ್ಲರ್ಕ್ (84*ರನ್, 54 ಎಸೆತ, 8 ಬೌಂಡರಿ, 5 ಸಿಕ್ಸರ್) ಹೋರಾಟದಿಂದ ಗೆಲುವಿನತ್ತ ಸಾಗಿದ ದ. ಆಫ್ರಿಕಾ, 48.5 ಓವರ್ಗಳಲ್ಲಿ 7 ವಿಕೆಟ್ಗೆ 252 ರನ್ ಗಳಿಸಿ, ಆತಿಥೇಯರಿಗೆ ಶಾಕ್ ನೀಡಿತು.
ಭಾರತ: 49.4 ಓವರ್ಗಳಲ್ಲಿ 251 (ಪ್ರತಿಕಾ ರಾವಲ್ 37, ಸ್ಮ$ತಿ 23, ಹರ್ಲೀನ್ 13, ಹರ್ಮಾನ್ಪ್ರೀತ್ 9, ಜೆಮೀಮಾ 0, ದೀಪ್ತಿ 4, ಅಮನ್ಜೋತ್ 13, ರಿಚಾ ಘೋಷ್ 94, ಸ್ನೇಹಾ ರಾಣಾ 33, ಶ್ರೀಚರಣಿ 0, ಕ್ರಾಂತಿ ಗೌಡ್ 0*, ಕ್ಲೋಯ್ ಟ್ರಯಾನ್ 32ಕ್ಕೆ 3, ಮ್ಲಾಬಾ 46ಕ್ಕೆ 2, ಕಾಪ್ 45ಕ್ಕೆ 2).
ದಕ್ಷಿಣ ಆಫ್ರಿಕಾ: 48.5 ಓವರ್ಗಳಲ್ಲಿ 7 ವಿಕೆಟ್ಗೆ 252 (ತಜ್ಮಿನ್ 0, ಲೌರಾ ವೋಲ್ವಾರ್ಡ್ 70, ಲುಜ್ 5, ಮಾರಿಜಾನ್ನೆ 20, ಅನ್ನೆಕೆ 1, ಸಿನಾಲೊ 14, ಟ್ರಯಾನ್ 49, ಡಿ ಕ್ಲರ್ಕ್ 84*, ಕ್ರಾಂತಿ ಗೌಡ್ 59ಕ್ಕೆ 2, ಸ್ನೇಹಾ 47ಕ್ಕೆ 2, ದೀಪ್ತಿ ಶರ್ಮ 54ಕ್ಕೆ 1).