ಬಾಡಿಬಿಲ್ಡಿಂಗ್ ಸೀಕ್ರೆಟ್ ಬಿಚ್ಚಿಟ್ಟ 8 ಬಾರಿ ಮಿಸ್ಟರ್ ಒಲಂಪಿಯಾ ರೋನಿ ಕೊಲ್ಮಾನ್...

mr.olympia
Published on

ನವದೆಹಲಿ: ರೋನಿ ಕೊಲ್ಮಾನ್, ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅಮೆರಿಕದ ಈ ದೈತ್ಯ 8 ಬಾರಿ ಮಿಸ್ಟರ್ ಒಲಂಪಿಯಾ ಜಯಿಸಿ ದಾಖಲೆ ನಿರ್ಮಿಸಿರುವುದು ಹಳೆಯ ವಿಷಯ. ಇದಕ್ಕಾಗಿ ಅಂತಾರಾಷ್ಟ್ರೀಯ ಸ್ಪೋರ್ಟ್ಸ್ ಹಾಲ್ ಆಫ್​ ಫೇಮ್ ಸೇರಿದಂತೆ ಹಲವು ಪ್ರಶಸ್ತಿಗಳು ದಕ್ಕಿವೆ. ಆಲ್ ಟೈಮ್ ಗ್ರೇಟ್ ಬಾಡಿ ಬಿಲ್ಡರ್ ಎನಿಸಿರುವ ರೋನಿ, ತಮ್ಮ ದೈಹಿಕ ಕಸರತ್ತಿನ ಬಗ್ಗೆ ಹೇಳಿಕೊಂಡಿದ್ದಾರೆ. ಅಮೆರಿಕದ ಖ್ಯಾತ ಯುಎಫ್ ಸಿ ವೀಕ್ಷಕರ ವಿವರಣೆಗಾರ ಹಾಗೂ ಕಾಮೆಡಿಯನ್ ಜೋ ರೊಗನ್ಸ್ ನಡೆಸಿಕೊಡುವ ಪ್ರಸಿದ್ಧ ಕಾರ್ಯಕ್ರಮ ‘ಜೋ ರೊಗನ್ಸ್ ಎಕ್ಸ್‌ಪಿರಿಯನ್ಸ್’ ಸಂಚಿಕೆಯಲ್ಲಿ ರೋನಿ ಕೊಲ್ಮಾನ್ ಹೇಳಿಕೊಂಡಿದ್ದಾರೆ.

ಜೋ ರೊಗನ್ಸ್ ಎಕ್ಸ್‌ಪಿರಿಯನ್ಸ್ ಕಾರ್ಯಕ್ರಮದಲ್ಲಿ ತಮ್ಮ ದೈಹಿಕ ಕಸರತ್ತಿನ ಬಗ್ಗೆ ಮಾತನಾಡಿರುವ ರೋನಿ ಕೊಲ್ಮಾನ್, ಪ್ರತಿ 3 ಗಂಟೆಗೊಮ್ಮೆ 450 ಗ್ರಾಂ ಚಿಕನ್ ತಿನ್ನುತ್ತಾರಂತೆ. ಚೆನ್ನಾಗಿ ಬೇಯಿಸಿದ ಚಿಕನ್ ಜತೆಗೆ ಅರ್ಧಕಪ್ ರೈಸ್‌ಯಿದ್ದರೆ ಸಾಕು ಎನ್ನುತ್ತಾರೆ ಮೀ.ಒಲಿಂಪಿಯನ್. ಪ್ರತಿದಿನ ಕನಿಷ್ಠ 6 ಬಾರಿ ಊಟ ಮಾಡುತ್ತೇನೆ. ಹೆಚ್ಚು ಭಾರದ ವಸ್ತುಗಳನ್ನು ಎತ್ತುತ್ತೇನೆ. ದೈಹಿಕ ಕಸರತ್ತು ಮಾಡಿದಷ್ಟು ಹಸಿವು ಜಾಸ್ತಿಯಾಗುತ್ತದೆ. ಒಂದೇ ಭಾರಿ ಹೆಚ್ಚಿಗೆ ತಿನ್ನಲು ಇಷ್ಟಪಡುವುದಿಲ್ಲ. ಹಂತ ಹಂತವಾಗಿ ತಿನ್ನಲು ಬಯಸುತ್ತೇನೆ ಎನ್ನುತ್ತಾರೆ. ದಿನಕ್ಕೂ ಸುಮಾರು 3 ಕೆಜಿ ಚಿಕನ್ ತಿಂದರೂ ನನ್ನ ದೇಹದಲ್ಲಿ ಕೇವಲ ಶೇ. 0.33 ರಷ್ಟು ಬೊಜ್ಜು ಮಾತ್ರವಿದೆ ಎಂದು 56 ವರ್ಷದ ಕೊಲ್ಮಾನ್ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net