More

    ಕೇರಳ ನರ್ಸ್ ಸೇವೆಗೆ ಗಿಲ್‌ಕ್ರಿಸ್ಟ್ ಶಹಬ್ಬಾಸ್ ಗಿರಿ…!

    ಬೆಂಗಳೂರು: ಕಳೆದ ಮೂರು ತಿಂಗಳಿಂದ ಕರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ಮಹಾಮಾರಿ ವಿರುದ್ಧ ವೈದ್ಯಕೀಯ ವರ್ಗವೇ ಹೋರಾಡುತ್ತಿದೆ. ಭಾರತದಲ್ಲಿ ಕರೊನಾ ವಾರಿಯರ್ಸ್‌ ಅಂತಾನೇ ಹೆಸರಾಗಿದ್ದಾರೆ. ವಿದೇಶದಲೂ ಭಾರತೀಯರು ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವುದು ಹೊಸ ವಿಷಯ ಏನಲ್ಲ. ಕೇರಳ ಮೂಲದ 23 ವರ್ಷದ ನರ್ಸ್ ಆಸ್ಟ್ರೇಲಿಯಾದಲ್ಲಿ ಸಲ್ಲಿಸುತ್ತಿರುವ ಸೇವೆಗೆ ಮಾಜಿ ಕ್ರಿಕೆಟಿಗ ಆಡಂ ಗಿಲ್‌ಕ್ರಿಸ್ಟ್ ಮುಕ್ತ ಕಂಠದಿಂದ ಶ್ಲಾಸಿದ್ದಾರೆ.

    ಇದನ್ನೂ ಓದಿ: 21 ಬಾಲಕಿಯರನ್ನು ದತ್ತು ಪಡೆದ ಮಾಜಿ ಹಾಕಿ ಆಟಗಾರ

    ಕೇರಳ ಕೊಟಾಯಂನ ಶರೊನ್ ವರ್ಗಿಸ್ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ (ವೊಲಾಂಗಾಂಗ್ ವಿಶ್ವವಿದ್ಯಾಲಯ) ನರ್ಸಿಂಗ್ ಪದವಿ ಪೂರೈಸಿ, ಬಳಿಕ ಅಲ್ಲಿಯೇ ನೋಂದಣಿ ಮಾಡಿಕೊಂಡಿದ್ದರು. ಶರೊನ್ ತಾಯಿ ಆನ್ಸಿ ಕುವೈತ್‌ನಲ್ಲಿ ನರ್ಸ್ ಆಗಿದ್ದಾರೆ. ತಾಯಿ ವೃತ್ತಿಯಲ್ಲಿಯೇ ಮುಂದುವರಿಯಬೇಕೆಂದು ನಿರ್ಧರಿಸಿದ ಶರೊನ್, ಆಸ್ಟ್ರೇಲಿಯಾದಲ್ಲಿ ನರ್ಸಿಂಗ್ ವೃತ್ತಿ ಆಯ್ದುಕೊಂಡರು. ಇವರ ಸೇವೆ ಗಮನಿಸಿದ ಗಿಲ್‌ಕ್ರಿಸ್ಟ್ ವಿಡಿಯೋ ಕಾನ್ಫೆರೆನ್ಸ್ ಮೂಲಕ ಶಹಬ್ಬಾಸ್ ಗಿರಿ ನೀಡಿದ್ದಾರೆ. ನಿಮ್ಮ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದಿದ್ದಾರೆ.

     ಗಿಲ್‌ಕ್ರಿಸ್ಟ್ ಮೆಸೇಜ್‌ನಿಂದ ಥ್ರಿಲ್

    ಗಿಲ್‌ಕ್ರಿಸ್ಟ್ ಮೆಸೇಜ್ ಥ್ರಿಲ್ ಆದ ಶರೊನ್, ನಿಜಕ್ಕೂ ಅಚ್ಚರಿ ಉಂಟಾಯಿತು. ಇಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆ ಎನಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆ ನಡೆದಿದೆ. ನನ್ನ ಸ್ವಗ್ರಾಮದಿಂದ ಹಲವು ಮಂದಿ ನನಗೆ ಮೆಸೇಜ್, ಫೋನ್ ಮಾಡಿ ಖುಷಿ ಹಂಚಿಕೊಂಡರು ಎಂದು ಹೇಳಿದ್ದಾರೆ.

     

    ಭಾರತದ ಮೊದಲ ಏಕದಿನ ಗೆಲುವಿಗೆ 45 ವರ್ಷ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts