More

    ಭಾರತದ ಮೊದಲ ಏಕದಿನ ಗೆಲುವಿಗೆ 45 ವರ್ಷ…!

    ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಭಾರತ ತಂಡವೇ ಡಿರೆಂಟ್. ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದ ದಿನದಿಂದಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಾ ಬಂದಿದೆ. ಕ್ರಿಕೆಟ್‌ನ ಅನೇಕ ದಾಖಲೆಗಳು ಭಾರತ ತಂಡದ ಹಾಗೂ ಭಾರತೀಯ ಕ್ರಿಕೆಟಿಗರ ಹೆಸರಿನಲ್ಲಿವೆ. 1971ರಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಆರಂಭಿಸಲಾಯಿತು. ಇದಾದ ಮೂರು ವರ್ಷಗಳ ಬಳಿಕ ಅಂದರೆ 1974ರಲ್ಲಿ ಭಾರತಕ್ಕೆ ಏಕದಿನ ಕ್ರಿಕೆಟ್‌ಗೆ ಮಾನ್ಯತೆ ದಕ್ಕಿತು. ಆದರೆ, ಭಾರತ ತನ್ನ ಮೊದಲು ಕಂಡಿದ್ದು ಮಾತ್ರ ಒಂದು ವರ್ಷಗಳ ಬಳಿಕ. ಆ ಮೊದಲ ಗೆಲುವಿಗೀಗ ಬರೋಬ್ಬರಿ 45 ವರ್ಷ. 1975ರ ಚೊಚ್ಚಲ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮೊದಲ ಗೆಲುವಿನ ನಗೆ ಬೀರಿತು.

    ಇದನ್ನೂ ಓದಿ: ಮಹಿಳಾ ಕ್ರಿಕೆಟ್​ನಲ್ಲಿ ಚೆಂಡು ಸಣ್ಣದಾಗಬೇಕು ಎಂದಿದ್ದೇಕೆ ಸೋಫಿ ಡಿವೈನ್?

    ಏಕದಿನ ಕ್ರಿಕೆಟ್ ಹುಟ್ಟಿಕೊಂಡ 4 ವರ್ಷಗಳ ತರುವಾಯ ವಿಶ್ವಕಪ್ ಟೂರ್ನಿ ಹುಟ್ಟುಕೊಂಡಿತು. ಭಾರತ ಸೇರಿದಂತೆ 8 ತಂಡಗಷ್ಟೇ ಟೂರ್ನಿಯಲ್ಲಿ ಭಾಗವಹಿಸಿದ್ದವು, ಕ್ರಿಕೆಟ್ ಜನಕರಾದ ಇಂಗ್ಲೆಂಡ್ ಟೂರ್ನಿ ೇವರಿಟ್ ಆಗಿತ್ತು. ಇದಕ್ಕೂ ಮೊದಲ ಕೇವಲ 2 ಏಕದಿನ ಪಂದ್ಯಗಳನ್ನಾಡಿದ್ದ ಭಾರತ ಇಂಗ್ಲೆಂಡ್ ಎದುರು ಸೋಲು ಕಂಡಿತ್ತು. ಎಸ್.ವೆಂಕಟರಾಘವನ್ ಸಾರಥ್ಯದ ಭಾರತ ತಂಡದ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು 202 ರನ್‌ಗಳಿಂದ ಹೀನಾಯ ಸೋಲು ಕಂಡಿತ್ತು. 1975ರ ಜೂನ್ 11ರಂದು ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ಈಸ್ಟ್ ಆಫ್ರಿಕಾ ತಂಡವನ್ನು ಮಣಿಸಿ ವಿಶ್ವಕಪ್‌ನಲೂ ಗೆಲುವಿನ ನಗೆ ಬೀರಿತ್ತು.

    ಭಾರತದ ಮೊದಲ ಏಕದಿನ ಗೆಲುವಿಗೆ 45 ವರ್ಷ...!

    ತಲಾ 60 ಓವರ್‌ಗಳ ಪಂದ್ಯದಲ್ಲಿ ಮೊದಲು ಟಾಸ್ ಜಯಿಸಿದ ಈಸ್ಟ್ ಆಫ್ರಿಕಾ ಬ್ಯಾಟಿಂಗ್ ಗಿಳಿಯಿತು. ಮದನ್ ಲಾಲ್ (15ಕ್ಕೆ 3), ಮೋಹಿಂದರ್ ಅಮರ್‌ನಾಥ್ (39ಕ್ಕೆ 2) ಹಾಗೂ ಸಯ್ಯದ್ ಅಬಿದ್ ಅಲಿ (22ಕ್ಕೆ 2) ಮಾರಕ ದಾಳಿಗೆ ನಲುಗಿದ ಈಸ್ಟ್ ಆಫ್ರಿಕಾ 120 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ, ಸುನೀಲ್ ಗಾವಸ್ಕರ್ (65*ರನ್, 86 ಎಸೆತ, 9 ಬೌಂಡರಿ) ಹಾಗೂ ಾರೂಕ್ ಇಂಜಿನಿಯರ್ (54 ರನ್, 93 ಎಸೆತ, 7 ಬೌಂಡರಿ) ಜೋಡಿಯ ಬ್ಯಾಟಿಂಗ್ ನೆರವಿನಿಂದ 29.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 123 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ 2 ಸೋಲು, ಏಕೈಕ ಗೆಲುವಿನೊಂದಿಗೆ ಭಾರತ ಅಭಿಯಾನ ಮುಗಿಸಿತ್ತು. ಭಾರತ ಆಡಿದ 4ನೇ ಪಂದ್ಯದಲ್ಲೇ ಗೆಲುವಿನ ನಗೆ ಬೀರಿತು.

    21 ಬಾಲಕಿಯರನ್ನು ದತ್ತು ಪಡೆದ ಮಾಜಿ ಹಾಕಿ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts