More

    ನರ್ಸಿಂಗ್ ಮರು ಪರೀಕ್ಷೆ ರದ್ದುಪಡಿಸಿ

    ಕೊಪ್ಪಳ: ನರ್ಸಿಂಗ್ ಕೋರ್ಸ್ ಮರು ಪರೀಕ್ಷೆ ವಿರೋಧಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಅಶೋಕ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ಈಗಾಗಲೇ 2022ರ ನ.22-ನ.25ರವರೆಗೆ ನರ್ಸಿಂಗ್ ಪರೀಕ್ಷೆ ನಡೆಸಿದ್ದು, 88 ಸಾವಿರ ವಿದ್ಯಾರ್ಥಿಗಳು ಬರೆದಿದ್ದಾರೆ. ಆದರೆ,ಬೆಂಗಳೂರಿನ ಬಾಣಸವಾಡಿಯ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ನಡೆದಿದೆ ಎಂಬ ಕಾರಣಕ್ಕೆ ಮರು ಪರೀಕ್ಷೆ ನಡೆಸಲು ಮುಂದಾಗಿದ್ದು 2023ರ ಜ.21ರಂದು ಆರಂಭಿಸಲು ನಿರ್ಧರಿಸಲಾಗಿದೆ. ಆದರೆ, ಕೋರ್ಟ್ ಇದಕ್ಕೆ ಸಮ್ಮತಿ ನೀಡಿಲ್ಲ. ಮಕ್ಕಳ ಆಸಕ್ತಿ ಮೇರೆಗೆ ಮರು ಪರೀಕ್ಷೆ ನಡೆಸುವಂತೆ ಆದೇಶ ನೀಡಿದೆ. ಆದರೆ, ಕೆಎಸ್‌ಡಿಎನ್‌ಇ ಬೋರ್ಡ್ ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ಹಾಗೂ ಸಲಹೆ ಕೇಳದೆ ಏಕಾಏಕಿ ನಿರ್ಧಾರ ಕೈಗೊಂಡಿದೆ. ಇದರಿಂದ ಹಲವು ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಕಷ್ಟಪಟ್ಟು ಬರೆದವರಿಗೂ ಅನ್ಯಾಯವಾಗುತ್ತದೆ. ಎಲ್ಲರಿಗೂ ಮರು ಪರೀಕ್ಷೆ ನಡೆಸಬಾರದು. ಯಾವ ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆದಿದೆಯೋ ಅಲ್ಲಷ್ಟೇ ಮರು ಪರೀಕ್ಷೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಧರ ದೇಶಪಾಂಡೆ, ನಗರ ವಿಸ್ತಾರಕ ಅರುಣ ಬಾರಕೇರ, ವಿದ್ಯಾರ್ಥಿಗಳಾದ ಬಸವರಾಜ, ವೀರೇಶ, ಮಾರುತಿ, ಕಾರ್ತಿಕ, ಸುರೇಂದ್ರ ಹಾದಿಮನಿ, ಶಿವಕುಮಾರ, ಭಾಗ್ಯಶ್ರೀ, ರಾಜೇಶ್ವರಿ, ಚೈತ್ರಾ, ಬಸಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts