

ಬೆಂಗಳೂರು: ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್, ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಮತ್ತು ಈ ಸಾಧನೆಯನ್ನು 3 ಬಾರಿ ಮಾಡಿದ ಏಕೈಕ ಬ್ಯಾಟ್ಸ್ಮನ್, ಟೆಸ್ಟ್ ಕ್ರಿಕೆಟ್ನಲ್ಲಿ ಸರ್ವಾಧಿಕ ರನ್ ಸಿಡಿಸಿದ ವಿಶ್ವದಾಖಲೆಯನ್ನು 2005ರವರೆಗೂ ಹೊಂದಿದ್ದ ಬ್ಯಾಟ್ಸ್ಮನ್ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 100 ಕ್ಯಾಚ್ ಹಿಡಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆ ಹೊಂದಿರುವ ಲಿಟ್ಟಲ್ ಮಾಸ್ಟರ್ ಸುನೀಲ್ ಗಾವಸ್ಕರ್ಗೆ ಶುಕ್ರವಾರ 71ನೇ ಜನ್ಮದಿನದ ಸಂಭ್ರಮ. ಈ ವೇಳೆ ಕ್ರಿಕೆಟ್ ಜಗತ್ತಿನ ಹಾಲಿ&ಮಾಜಿ ಆಟಗಾರರು ಗಾವಸ್ಕರ್ಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ನನ್ನ ಆದರ್ಶ ಬ್ಯಾಟ್ಸ್ಮನ್ ಸುನೀಲ್ ಗಾವಸ್ಕರ್ ಸರ್ ಅವರನ್ನು 1987ರಲ್ಲಿ ನಾನು ಮೊದಲ ಬಾರಿಗೆ ಭೇಟಿಯಾಗಿದ್ದೆ. 13ನೇ ವಯಸ್ಸಿನಲ್ಲಿ ನನಗೆ ಸಿಕ್ಕ ಈ ಅದೃಷ್ಟವನ್ನು ನನಗೆ ನಂಬಲು ಸಾಧ್ಯವಾಗಿರಲಿಲ್ಲ. ನಾನು ಅವರಂತೆಯೇ ಆಗಲು ಬಯಸಿದ್ದೆ. ಎಂಥಾ ಅದ್ಭುತ ದಿನ ಅದಾಗಿತ್ತು. ಸರ್ ನಿಮಗೆ 71ನೇ ಜನ್ಮದಿನದ ಶುಭಾಶಯಗಳು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ. ಮುಂಬೈ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಕೂಡ ಗಾವಸ್ಕರ್ಗೆ ಶುಭಾಶಯ ತಿಳಿಸಿದ್ದಾರೆ. ಐಸಿಸಿ, ಬಿಸಿಸಿಐ ಕೂಡ ವಿವಿಧ ಸಂದೇಶಗಳ ಮೂಲಕ ಗಾವಸ್ಕರ್ಗೆ ಜನ್ಮದಿನದ ಶುಭ ಹಾರೈಸಿದೆ.
ಇದನ್ನೂ ಓದಿ: ಸುನೀಲ್ ಗಾವಸ್ಕರ್ಗೆ 71ನೇ ಜನ್ಮದಿನದ ಸಂಭ್ರಮ
ಮಾಜಿ ಬ್ಯಾಟ್ಸ್ಮನ್ ವಿವಿಎಸ್ ಲ$್ಮಣ್ ಅವರು, ನನಗೆ ನೀವು ಸಾಕಷ್ಟು ಸ್ಫೂತಿರ್ ತುಂಬಿದ್ದೀರಿ. ನಿಮ್ಮೊಂದಿಗೆ ಕಾಮೆಂಟರಿ ಬಾಕ್ಸ್ ಹಂಚಿಕೊಂಡಿರುವುದು ನನಗೆ ಹೆಮ್ಮೆಯ ವಿಷಯ ಎಂದು ಬರೆದುಕೊಂಡಿದ್ದಾರೆ. ಮಾಜಿ ಆಟಗಾರ ಮೊಹಮ್ಮದ್ ಕೈ್ ಅವರು ಗಾವಸ್ಕರ್ ಜತೆಗೆ ಈಜುಕೊಳದಲ್ಲಿ ಜತೆಯಾಗಿ ಈಜುತ್ತಿರುವ ವಿಡಿಯೋ ಪ್ರಕಟಿಸಿದ್ದು, ಹೆಲ್ಮೆಟ್ ಇಲ್ಲದೆ ಕೆಚ್ಚೆದೆಯ ಬ್ಯಾಟಿಂಗ್ ಪ್ರದಶಿರ್ಸಿದ ನಿಮ್ಮ ಬಗ್ಗೆ ಕೇಳುತ್ತಲೇ ನಾವು ಬೆಳೆದಿದ್ದೆವು. ಈಗ ನಿಮ್ಮೊಂದಿಗೆ ಮಾತನಾಡುತ್ತಲೇ ಆ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಅದೃಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.