ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಶರಣಾದ ಬೆಂಗಳೂರು ಎಫ್ ಸಿ

bfc and atk for web
Published on

ಮಾರ್ಗೋವಾ: ಕಳೆದ ನಾಲ್ಕು ಪಂದ್ಯಗಳಲ್ಲಿ ಅಜೇಯ ಸಾಧನೆ ಮಾಡಿದ್ದ ಮಾಜಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮತ್ತೆ ಮುಗ್ಗರಿಸಿತು. ಫರ್ಟೋಡ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ತಂಡ 0-2 ಗೋಲುಗಳಿಂದ ಎಟಿಕೆ ಮೋಹನ್ ಬಾಗನ್ ತಂಡವನ್ನು ಮಣಿಸಿತು. ಇದರೊಂದಿಗೆ ಲೀಗ್‌ನಲ್ಲಿ 6ನೇ ಸೋಲು ಕಂಡ ಬಿಎಫ್ ಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಉಳಿಯಿತು.

ಬಹುತೇಕ ಪ್ಲೇ-ಆ್ ಹಂತ ಖಚಿತಪಡಿಸಿಕೊಂಡಿರುವ ಎಟಿಕೆ ಮೋಹನ್ ಬಾಗನ್ ತಂಡ ಮತ್ತೊಮ್ಮೆ ಬೆಂಗಳೂರು ಎಫ್ ಸಿ ಮೇಲೆ ಸವಾರಿ ನಡೆಸಿತು. ಮೊದಲ ಸುತ್ತಿನಲ್ಲಿ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಶರಣಾಗಿದ್ದ ಬಿಎಫ್ ಸಿ, ಸೇಡು ತೀರಿಸಿಕೊಳ್ಳಲು ಸಿಕ್ಕ ಅವಕಾಶವನ್ನು ಕೈಚೆಲ್ಲಿತು. ಸ್ಟಾರ್ ಆಟಗಾರ ಕೃಷ್ಣ ರಾಯ್ (37ನೇ ನಿಮಿಷ) ಪೆನಾಲ್ಟಿ ಮೂಲಕ ಗೋಲು ತಂದುಕೊಟ್ಟರೆ, 44ನೇ ನಿಮಿಷದಲ್ಲಿ ಮಾರ್ಸಿಲಿನ್ಹೋ ಫ್ರೀ ಕಿಕ್ ಮೂಲಕ ಮತ್ತೊಂದು ಗೋಲು ತಂದುಕೊಟ್ಟರು. ಇದರಿಂದ ಮೊದಲಾರ್ಧದಲ್ಲಿ ಬಿಎಫ್ ಸಿ 0-2 ರಿಂದ ಹಿನ್ನಡೆ ಅನುಭವಿಸಿತು. ದ್ವಿತೀಯಾರ್ಧದಲ್ಲಿ ಬಿಎಫ್ ಸಿ ಪ್ರಬಲ ಪೈಪೋಟಿ ನೀಡಿದರೂ ಎಟಿಕೆ ಮೋಹನ್ ಬಾಗನ್ ತಂಡದ ರಕ್ಷಣಾತ್ಮಕ ನಿರ್ವಹಣೆ ಎದುರು ನಡೆಯಲಿಲ್ಲ.

ಬಿಎಫ್ ಸಿಗೆ ಮುಂದಿನ ಎದುರಾಳಿ: ಮುಂಬೈ ಸಿಟಿ ಎಫ್ ಸಿ

ಯಾವಾಗ: ಸೋಮವಾರ (ಫೆ.15).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net