

ಬೆಂಗಳೂರು: ರೈಡರ್ ಮಂಜೀತ್ (19 ಅಂಕ) ತೋರಿದ ಅಮೋಘ ನಿರ್ವಹಣೆಯ ಬಲದಿಂದ ಹರಿಯಾಣ ಸ್ಟೀಲರ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಾಲ್ ವಾರಿಯರ್ ವಿರುದ್ಧ 41-33 ಅಂಕಗಳಿಂದ ಗೆದ್ದು ಶುಭಾರಂಭ ಕಂಡಿತು. ಟೂರ್ನಿಯ ಎರಡನೇ ದಿನದ ಮೊದಲ ಎರಡು ಪಂದ್ಯಗಳು ರೋಚಕ ಟೈನಲ್ಲಿ ಅಂತ್ಯಗೊಂಡವು.
ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶನಿವಾರದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಹರಿಯಾಣ ಮೊದಲಾರ್ಧದಲ್ಲಿ 12-13ರಿಂದ ಅಲ್ಪ ಹಿನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಭರ್ಜರಿ ರೈಡಿಂಗ್ ಸಂಘಟಿಸುವ ಮೂಲಕ ಗೆಲುವು ಸಾಧಿಸಿ ಬೀಗಿತು. ಬೆಂಗಾಲ್ ಪರ ಕನ್ನಡಿಗ ಮನೋಜ್ ಗೌಡ (8) ಮತ್ತು ನಾಯಕ ಮಣಿಂದರ್ ಸಿಂಗ್ (7) ಹೋರಾಟ ವ್ಯರ್ಥಗೊಂಡಿತು.
ಬಳಿಕ ಅವರ ಅನುಪಸ್ಥಿತಿಯಲ್ಲೂ ತಲೈವಾಸ್ ತಂಡ ಗಮರ್ನಾಹ ಪ್ರದರ್ಶನ ನೀಡಿತು. ಗುಜರಾತ್ ಜೈಂಟ್ಸ್ ತಂಡ ಮೊದಲಾರ್ಧದಲ್ಲಿ 18-16ರಿಂದ ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದ ಆರಂಭದಲ್ಲೇ ಗುಜರಾತ್ ಜೈಂಟ್ಸ್ ತಂಡವನ್ನು ಆಲೌಟ್ ಬಲೆಗೆ ಬೀಳಿಸಿ ತಿರುಗೇಟು ನೀಡಿದ ತಮಿಳ್ ತಲೈವಾಸ್ ತಂಡ ಸಮಬಲ ಸಾಧಿಸುವಲ್ಲಿ ಸಫಲವಾಯಿತು.
ಪೈರೇಟ್ಸ್- ಪಲ್ಟಾನ್ ಸಮಬಲ: ಮೊದಲಾರ್ಧದ 7 ಅಂಕಗಳ ಮುನ್ನಡೆ ಕಾಯ್ದುಕೊಳ್ಳು ವಲ್ಲಿ ವಿಫಲವಾದ ಪುಣೇರಿ ಪಲ್ಟಾನ್ ತಂಡ ದಿನದ ಮೊದಲ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಎದುರು 34-34 ಅಂಕಗಳಿಂದ ಟೈ ಸಾಧಿಸಿತು. ಪೈರೇಟ್ಸ್ 26ನೇ ನಿಮಿಷದಲ್ಲಿ ಪುಣಿ ತರವನ್ನು ಆಲೌಟ್ ಮಾಡಿ ತಿರುಗೇಟು ನೀಡಿತು. ಕಡೇ ಕ್ಷಣದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆಹೋದ ಇತ್ತಂಡಗಳು ಟೈ ಸಾಧಿಸಿದವು.