

RR vs PBKS: ಇಂದು ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಐಪಿಎಲ್ ಪುನಾರಂಭದ ಎರಡನೇ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯ ಶುರುವಿಗೂ ಮೊದಲು ಮೈದಾನದಲ್ಲಿ ಸೇರಿದ್ದ ಕ್ರಿಕೆಟ್ ಪ್ರೇಮಿಗಳು ಮತ್ತು ಎರಡು ತಂಡದ ಕ್ರಿಕೆಟಿಗರು ಭಾರತೀಯ ಸೇನೆಗೆ ಗೌರವ ಅರ್ಪಿಸಿದರು.
ಭಾರತ-ಪಾಕ್ ಸಂಘರ್ಷದಿಂದ ಒಂದು ವಾರ ಮುಂದೂಡಿಕೆಯಾಗಿದ್ದ ಐಪಿಎಲ್ ಟೂರ್ನಿಗಳು ಇದೀಗ ಪುನಾರಂಭಗೊಂಡಿದೆ. ಇದಕ್ಕೆ ಭಾರತೀಯ ಸೇನೆಯ ಪರಿಶ್ರಮ ಮತ್ತು ತ್ಯಾಗಗಳು ಅಡಗಿವೆ. ಈ ಸಮಯದಲ್ಲಿ ನಮ್ಮ ಸೇನೆಗೆ ಎದ್ದು ನಿಂತು ಸಲಾಂ ಎನ್ನುವ ಎಂಬ ಕರೆಗೆ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಮತ್ತು ಕ್ರಿಕೆಟಿಗರು ತಲೆಬಾಗಿದರು.
ಭಾರತೀಯ ಸೇನೆಗೆ ಧನ್ಯವಾದ. ಜೈಹಿಂದ್ ಎಂದು ತಿಳಿಸಿದರು. ಈ ವಿಷಯವನ್ನು ಐಪಿಎಲ್ ತನ್ನ ಅಧಿಕೃತ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ. ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿವೆ,(ಏಜೆನ್ಸೀಸ್).