ಇಂಗ್ಲೆಂಡ್​ ಟೆಸ್ಟ್​ಗೆ ಹೊಸ ಕ್ಯಾಪ್ಟನ್ ಫಿಕ್ಸ್​!? ಟೆಸ್ಟ್​ ಸರಣಿಗೂ ಮುನ್ನವೇ ನಿರ್ಧಾರ ತೆಗೆದುಕೊಂಡ BCCI

ವಿಜಯವಾಣಿ - 2025-03-15T120255.745
Published on

BCCI: 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಕ್ರಿಕೆಟ್​ ಇತಿಹಾಸದಲ್ಲೇ ದಾಖಲೆಯನ್ನು ನಿರ್ಮಿಸಿದ ಭಾರತ, ರೋಹಿತ್ ಶರ್ಮ ನಾಯಕತ್ವದಲ್ಲಿ ಸತತವಾಗಿ ಐಸಿಸಿ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿಹಿಡಿಯಿತು. ಕಳೆದ ವರ್ಷ ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐಸಿಸಿ ಟಿ20 ವಿಶ್ವಕಪ್​ ಟ್ರೋಫಿ ಗೆದ್ದ ಭಾರತ, ಈ ವರ್ಷ ದುಬೈನಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆದ್ದು ಬೀಗಿತು. ಟೂರ್ನಿ ಮುಗಿದ ಬೆನ್ನಲ್ಲೇ ರೋಹಿತ್ ಶರ್ಮ ನಿವೃತ್ತಿ ಬಗ್ಗೆ ಪ್ರಶ್ನೆಗಳು ಕೇಳಿಬಂದಿತ್ತು. ಇದಕ್ಕೆ ತೆರೆ ಕೂಡ ಬಿದ್ದಿತು. ಆದರೀಗ ನಾಯಕತ್ವ ಮುಂದುವರಿಕೆ ಪ್ರಶ್ನೆಗಳು ಭುಗಿಲೆದ್ದಿವೆ.

ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಎಂದಿನಂತೆ ಈ ಬಾರಿಯೂ ರೋಹಿತ್ ಶರ್ಮ ಅವರೇ ನಾಯಕತ್ವ ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಟೆಸ್ಟ್​ ಕ್ಯಾಪ್ಟನ್ಸಿಯಲ್ಲಿ ಬದಲಾವಣೆ ತರಲಾಗಿದೆ ಎಂಬ ವದಂತಿಗಳು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಚಾಂಪಿಯನ್ಸ್ ಟ್ರೋಫಿಯನ್ನು ಭಾರತಕ್ಕೆ ಗೆದ್ದುಕೊಟ್ಟ ರೋಹಿತ್ ಅವರ ಕ್ರಿಕೆಟ್​ ಬದುಕು ಈಗ ಮತ್ತಷ್ಟು ವಿಸ್ತರಿಸಿದ್ದು, ನಾಯಕತ್ವಕ್ಕೆ ಬಿಸಿಸಿಐ ಕೂಡ ಬೆಂಬಲ ಸೂಚಿಸಿದೆ.

ವರದಿಗಳ ಪ್ರಕಾರ, ಐಪಿಎಲ್​ ಮುಗಿದ ಬಳಿಕ ಜೂನ್​ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಈ ತಂಡವನ್ನು ರೋಹಿತ್​ ಶರ್ಮ ಅವರೇ ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಕ್ಯಾಪ್ಟನ್ ಆಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿರುವ ರೋಹಿತ್​, ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ತಂಡವನ್ನು ಮುನ್ನಡೆಸಲು ಸರಿಯಾದ ಅಭ್ಯರ್ಥಿ ಎಂದು ಬಿಸಿಸಿಐ ಭಾವಿಸಿದೆ ಎಂದು ವರದಿಗಳು ಸೂಚಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net