ಹೋಳಿ ದಿನವೇ ವಿದ್ಯಾರ್ಥಿಗಳ ಬಣ್ಣ ಬಯಲು ಮಾಡಿದ ಪ್ರಿನ್ಸಿಪಾಲ್​! ಖಾಕಿಗೆ ಬರೆದ ಪತ್ರದಲ್ಲಿತ್ತು ಬೆಚ್ಚಿಬೀಳಿಸೋ ಸಂಗತಿ | Police Raid

ವಿಜಯವಾಣಿ - 2025-03-15T112311.717
Published on

ಕೊಚ್ಚಿ: ಕಲಾಮಸ್ಸೆರಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಐಜು ಥಾಮಸ್ ಬರೆದ ಒಂದೇ ಒಂದು ಪತ್ರದಿಂದ ಕಾಲೇಜಿನ ಕೆಲವು ವಿದ್ಯಾರ್ಥಿಗಳ ಅಕ್ರಮಗಳು ಬಯಲಿಗೆ (Police Raid) ಬಂದ ಘಟನೆ ಕೇರಳದ ಕೊಚ್ಚಿಯಲ್ಲಿ ವರದಿಯಾಗಿದೆ.

ಕಾಲೇಜಿನ ಪ್ರಿನ್ಸಿಪಾಲ್​ ಆದ ಐಜು, ಪತ್ರದಲ್ಲಿ ಕೆಲವು ಅಕ್ರಮಗಳು ನಮ್ಮ ಕಾಲೇಜು ವಾತಾವರಣದಲ್ಲಿ ನಡೆಯುತ್ತಿದೆ. ಹೋಳಿ ಹಬ್ಬದ ದಿನ ಇದರ ಹಾವಳಿ ಹೆಚ್ಚಬಹುದು. ದಯಮಾಡಿ ನೀವು ಆಗಮಿಸಬೇಕು. ತಪ್ಪಿತಸ್ಥರನ್ನು ಸೆರೆಹಿಡಿಯಬೇಕು ಎಂದು ಪತ್ರದಲ್ಲಿ ಬರೆದು ತಿಳಿಸಿದ್ದರು. ಪತ್ರ ಓದಿದ ಬೆನ್ನಲ್ಲೇ ಪೊಲೀಸರು ಕಾಲೇಜಿನ ಮೇಲೆ ದಾಳಿ ನಡೆಸಿ, ಕೆಲವರನ್ನು ಬಂಧಿಸಿದ್ದಾರೆ.

ಕಾಲೇಜಿನ ಮೇಲೆ ಏಕಾಏಕಿ ದಾಳಿ ನಡೆಸಲು ಪ್ರಾಂಶುಪಾಲರು ಕೊಟ್ಟ ಆ ಪತ್ರವೇ ಕಾರಣ ಎಂಬುದು ಇದೀಗ ಬಹಿರಂಗವಾಗಿದೆ. ಮಾರ್ಚ್ 12ರಂದು ಬರೆದ ಪತ್ರದಲ್ಲಿ ಕೊಚ್ಚಿ ಡಿಸಿಪಿಗೆ ಮಾಹಿತಿ ರವಾನಿಸಿದ ಥಾಮಸ್​, "ವಿದ್ಯಾರ್ಥಿಗಳು ಮದ್ಯ, ಮಾದಕ ದ್ರವ್ಯ ಮತ್ತು ಇತರ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಅವರ ಭವಿಷ್ಯ ಹಾಳಾಗುತ್ತಿದೆ. ಈ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ನನಗೆ ಮಾಹಿತಿ ಲಭಿಸಿದೆ. ವಿದ್ಯಾರ್ಥಿಗಳು ಹೋಳಿ ಹಬ್ಬಕ್ಕಾಗಿ ಹಣ ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಕ್ಯಾಂಪಸ್‌ನಲ್ಲಿ ಹೆಚ್ಚಿನ ಪೊಲೀಸ್ ಉಪಸ್ಥಿತಿ ಅಗತ್ಯವಿದೆ. ಕಾಲೇಜು ಆವರಣ ಮತ್ತು ಹಾಸ್ಟೆಲ್ ಪ್ರದೇಶಗಳಲ್ಲಿ ಖಾಕಿ ಕಣ್ಗಾವಲು ಹೆಚ್ಚಿಸಿ ಮತ್ತು ಮಾದಕ ದ್ರವ್ಯ ಬಳಕೆಯನ್ನು ತಡೆಯಲು ಮಧ್ಯಪ್ರವೇಶಿಸಿ" ಎಂದು ಪೊಲೀಸರಿಗೆ ಒತ್ತಾಯಿಸಿದ್ದರು.

ಪ್ರಾಂಶುಪಾಲರ ಪತ್ರದ ಬೆನ್ನಲ್ಲೇ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ, 'ಪೆರಿಯಾರ್' ಪುರುಷರ ಹಾಸ್ಟೆಲ್ ಮೇಲೆ ದಾಳಿ ನಡೆಸಿ, ಗಾಂಜಾ ವಶಪಡಿಸಿಕೊಂಡಿದ್ದಾರೆ. ಓರ್ವ ವಿದ್ಯಾರ್ಥಿ ನೀಡಿದ ಮಾಹಿತಿ ಆಧಾರ, ಮಾದಕವಸ್ತು ಹಂಚುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ, ಅವರಿಂದ 1.9 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಬಂಧಿತರು, ಕಾಲೇಜಿನ ಇಬ್ಬರು ಹಳೆಯ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net