

ನವದೆಹಲಿ: ಟೀಂ ಇಂಡಿಯಾದ ಮಾಜಿ ಆಟಗಾರ, ಪ್ರಸ್ತುತ ಐಪಿಎಲ್ನ ಕೊಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಆಗಿರುವ ಗೌತಮ್ ಗಂಭೀರ್ ಇದೀಗ ಕ್ರಿಕೆಟ್ ಲೋಕದಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸದಾ ಒಂದಲ್ಲ ಒಂದು ವಿಚಾರಗಳಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಗಂಭೀರ್ ಅವರಿಗೆ ಮತ್ತೊಮ್ಮೆ ಸುದ್ದಿಗೆ ಬಂದಿದ್ದು, ಈ ಬಾರಿ ಪಾಸಿಟಿವ್ ಚರ್ಚೆಗೆ ಗ್ರಾಸವಾಗಿದ್ದಾರೆ.
ಇದನ್ನೂ ಓದಿ: ಮೇ 19ರಿಂದ 21ವರೆಗೆ ಹೇರ್ ಕಲರಿಂಗ್ ಅಭಿಯಾನ
ಕಳೆದ ಹಲವು ದಿನಗಳಿಂದ ಭಾರೀ ಚರ್ಚೆಯಾಗುತ್ತಿರುವ ಟೀಂ ಇಂಡಿಯಾದ ಹೆಡ್ ಕೋಚ್ ಸ್ಥಾನ, ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ರಾಹುಲ್ ದ್ರಾವಿಡ್ ಜಾಗವನ್ನು ಗೌತಮ್ ಗಂಭೀರ್ ತುಂಬಲು ಸಾಧ್ಯವಿದೆಯಾ ಎಂಬ ಮಾತು ಕೇಳಿಬಂದ ಬೆನ್ನಲ್ಲೇ ಇದೀಗ ಬಿಸಿಸಿಐ ಗೌತಿ ಮೊರೆ ಹೋಗಿದ್ದು, ಹೆಡ್ ಕೋಚ್ ಆಗುವಂತೆ ಮಾತುಕತೆ ನಡೆಸಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಗಂಬೀರ್ ಅವರ ಆಸಕ್ತಿಯ ಬಗ್ಗೆ ತಿಳಿಯಲು ಭಾರತೀಯ ಕ್ರಿಕೆಟ್ ಮಂಡಳಿಯ ತಂಡ ನೇರವಾಗಿ ಗೌತಮ್ ಅವರನ್ನು ಸಂಪರ್ಕಿಸಿದ್ದು, ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೆ ಅರ್ಜಿಯನ್ನು ಮೇ. 27, ಐಪಿಎಲ್ ಫೈನಲ್‌ಗೂ ಒಂದು ದಿನ ಮುಂಚಿತವಾಗಿಯೇ ಸಲ್ಲಿಸಬೇಕಿದೆ ಎಂದು ತಿಳಿಸಿದೆ. ಸದ್ಯ ಈ ಸುದ್ದಿ ಕೆಲವರಿಗೆ ಬಹಳ ಶಾಕಿಂಗ್ ಆಗಿದ್ದು, ರಾಹುಲ್ ದ್ರಾವಿಡ್ ಅವರನ್ನು ಕೈಬಿಡಲಾಗುತ್ತದೆಯೇ ಎಂಬ ಪ್ರಶ್ನೆ ಭುಗಿಲೆದ್ದಿದೆ,(ಏಜೆನ್ಸೀಸ್).