

ಇದೇ ಫೆ.2ರಂದು (ಶನಿವಾರ) ನಡೆಯುವ ವಾರ್ಷಿಕ ಗಾಲಾ ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಯು ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ಗೆ ಜೀವಮಾನ ಪ್ರಶಸ್ತಿಯನ್ನು ನೀಡಲಿದೆ ಎಂದು ವರದಿಯಾಗಿದೆ.
2024ರ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಚಿನ್ ಸ್ವೀಕರಿಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 2023ರಲ್ಲಿ ಭಾರತದ ಮುಖ್ಯಕೋಚ್ ಆಗಿದ್ದ ರವಿಶಾಸ್ತ್ರಿ ಮತ್ತು ವಿಕೆಟ್ ಕೀಪರ್ ಪಾರೋಖ್ ಇಂಜಿನಿರಿಂಗ್ ಅವರಿಗೆ ಜೀವಮಾನ ಪ್ರಶಸ್ತಿ ನೀಡಲಾಗಿತ್ತು.
ಭಾರತದ ಪರ 664 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 51 ವರ್ಷದ ತೆಂಡೂಲ್ಕರ್, ಅತಿ ಹೆಚ್ಚು ಟೆಸ್ಟ್ ಮತ್ತು ODI ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.
ತೆಂಡೂಲ್ಕರ್ 200 ಟೆಸ್ಟ್ ಮತ್ತು 463 ODI ಪಂದ್ಯಗಳು ಆಡಿದ್ದು, ಇವರ ಅತ್ಯಧಿಕ ಪ್ರದರ್ಶನವಾಗಿದೆ. ಸಚಿನ್ 15,921 ಟೆಸ್ಟ್ ರನ್ ಮತ್ತು ODIಗಳಲ್ಲಿ 18,426 ರನ್ ಗಳಿಸಿದ್ದಾರೆ.(ಏಜೆನ್ಸೀಸ್)