ವಿಶ್ವಕಪ್​ ಟೂರ್ನಿಗೆ ಭಾರತ ತಂಡ ಪ್ರಕಟ: ಕನ್ನಡಿಗ ರಾಹುಲ್​, ಅಯ್ಯರ್​ಗೆ ಸ್ಥಾನ, ಸ್ಯಾಮ್ಸನ್​​ಗಿಲ್ಲ ಅವಕಾಶ ​

Team India
Published on

ನವದೆಹಲಿ: ಅಕ್ಟೋಬರ್ 5ರಿಂದ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಆತಿಥೇಯ ಭಾರತ ತಂಡವನ್ನು ಬಿಸಿಸಿಐ ಮಂಗಳವಾರ (ಸೆ.05) ಪ್ರಕಟಿಸಿದೆ.

ಮಧ್ಯಾಹ್ನ 1.30ಕ್ಕೆ ನಡೆದ ಸುದ್ದಿಗೋಷ್ಠಿಯಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ತಂಡದ ಆಟಗಾರರ ಹೆಸರನ್ನು ಪ್ರಕಟಿಸಿದರು.

ರೋಹಿತ್ ಶರ್ಮ ನೇತೃತ್ವದ ತಂಡಕ್ಕೆ ಹಾರ್ದಿಕ್ ಪಾಂಡ್ಯ ಉಪನಾಯಕನಾಗಿದ್ದು, ಜಸ್​ಪ್ರೀತ್​ ಬುಮ್ರಾ ಮತ್ತು ಕೆ.ಎಲ್. ರಾಹುಲ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಲ್ಲದೆ, ಸೂರ್ಯಕುಮಾರ್ ಯಾದವ್ ಕೂಡ ಸ್ಥಾನ ಪಡೆದಿದ್ದಾರೆ. ಆದರೆ, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಾಲ್ ಮತ್ತು ತಿಲಕ್ ವರ್ಮಾ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಅಲ್ಲದೆ, ಸ್ಟಾರ್​ ಆಟಗಾರರಾದ ಶಿಖರ್​ ಧವನ್​ ಹಾಗೂ ರವಿಚಂದ್ರನ್​ ಅಶ್ವಿನ್​ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಆಯ್ಕೆಯಾದ ಆಟಗಾರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

ರೋಹಿತ್​ ಶರ್ಮಾ (ನಾಯಕ), ಹಾರ್ದಿಕ್​ ಪಾಂಡ್ಯ (ಉಪನಾಯಕ), ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​. ರಾಹುಲ್​, ರವೀಂದ್ರ ಜಡೇಜಾ, ಶಾರ್ದುಲ್​ ಠಾಕೂರ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್​, ಕುಲದೀಪ್​ ಯಾದವ್​, ಮೊಹಮ್ಮದ್​ ಶಮಿ, ಅಕ್ಷರ್​ ಪಟೇಲ್​, ಇಶಾನ್​ ಕಿಶಾನ್​ ಮತ್ತು ಸೂರ್ಯಕುಮಾರ್​ ಯಾದವ್​.

ಅಕ್ಟೋಬರ್​ 5ರಿಂದ ಟೂರ್ನಿ ಆರಂಭವಾಗಲಿದ್ದು, ಮೊದಲ ಪಂದ್ಯ ಗುಜರಾತಿನ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. 2019ರ ಫೈನಲಿಸ್ಟ್​ಗಳಾದ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ತಂಡ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಲಿವೆ. ನವೆಂಬರ್​ 19ರಂದು ಫೈನಲ್​ ಪಂದ್ಯ ಇದೇ ಮೈದಾನದಲ್ಲಿ ನಡೆಯಲಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net