ಜರ್ಮನಿ ಫುಟ್‌ಬಾಲ್ ದಿಗ್ಗಜ ಗೆರ್ಡ್ ಮುಲ್ಲರ್ ಇನ್ನಿಲ್ಲ

muller web
Published on

ಮ್ಯೂನಿಚ್: ಪಶ್ಚಿಮ ಜರ್ಮನಿ ಫುಟ್‌ಬಾಲ್ ದಿಗ್ಗಜ ಮತ್ತು ಬೇಯರ್ನ್ ಮ್ಯೂನಿಚ್ ತಂಡದ ಮಾಜಿ ಫಾರ್ವರ್ಡ್ ಆಟಗಾರ ಗೆರ್ಡ್ ಮುಲ್ಲರ್ (75 ವರ್ಷ) ಭಾನುವಾರ ನಿಧನ ಹೊಂದಿದರು.

ಬುಂಡೆಸ್‌ಲಿಗಾದಲ್ಲಿ ಸಿಡಿಸಿದ 365 ಗೋಲುಗಳ ಸಹಿತ ಮ್ಯೂನಿಚ್ ಕ್ಲಬ್ ಪರ ಸರ್ವಾಧಿಕ 566 ಗೋಲು ಸಿಡಿಸಿದ ದಾಖಲೆ ಈಗಲೂ ಮುಲ್ಲರ್ ಹೆಸರಿನಲ್ಲಿದೆ. ಫುಟ್‌ಬಾಲ್ ಜಗತ್ತು ಕಂಡ ಅತ್ಯುತ್ತಮ ಸ್ಟ್ರೈಕರ್‌ಗಳಲ್ಲಿ ಒಬ್ಬರೆನಿಸಿದ ಮುಲ್ಲರ್, ಪಶ್ಚಿಮ ಜರ್ಮನಿ ಪರ 62 ಪಂದ್ಯ ಆಡಿ 68 ಗೋಲು ಸಿಡಿಸಿದ್ದರು.

ಜತೆಗೆ 1972ರಲ್ಲಿ ಯುರೋ ಕಪ್ ಮತ್ತು 1974ರ ಫಿಫಾ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅದಕ್ಕೆ ಮುನ್ನ 1970ರ ಫಿಫಾ ವಿಶ್ವಕಪ್‌ನಲ್ಲಿ ದಾಖಲೆಯ 10 ಗೋಲು ಸಿಡಿಸಿ ಗೋಲ್ಡನ್ ಬೂಟ್ ಜಯಿಸಿದ್ದರು. ಫಿಫಾ ವಿಶ್ವಕಪ್‌ನಲ್ಲಿ ಸರ್ವಾಧಿಕ 14 ಗೋಲು ಸಿಡಿಸಿದ ದಾಖಲೆ 32 ವರ್ಷಗಳ ಕಾಲ ಅವರ ಹೆಸರಿನಲ್ಲಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net