More

    ಕನ್ನಡಿಗ ರಾಹುಲ್ ದ್ರಾವಿಡ್‌ಗೆ ವಿಶೇಷ ಕೃತಜ್ಞತೆ ಸಲ್ಲಿಸಿದ ಶ್ರೀಲಂಕಾ ಕ್ರಿಕೆಟ್

    ನವದೆಹಲಿ: ಇತ್ತೀಚೆಗೆ ಭಾರತ ತಂಡದ 2ನೇ ಸ್ತರದ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡ ವೇಳೆ ಕೆಲ ಆಟಗಾರರು ಕರೊನಾ ಸೋಂಕಿಗೆ ಒಳಗಾಗಿದ್ದರೆ, ಅವರ ಸಂಪರ್ಕಿತರು ಕ್ವಾರಂಟೈನ್‌ಗೆ ಒಳಗಾಗಿದ್ದರು. ಇದರ ನಡುವೆಯೂ ಭಾರತ ತಂಡ ಸರಣಿಯ ಎಲ್ಲ 6 ಪಂದ್ಯಗಳನ್ನು ಆಡಿ ಪ್ರವಾಸವನ್ನು ಯಶಸ್ವಿಗೊಳಿಸಿತು. ಇದರ ಶ್ರೇಯವನ್ನು ಈಗ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಭಾರತ ತಂಡದ ಕೋಚ್ ಆಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ನೀಡಿದೆ.

    ಕರೊನಾ ಪ್ರಕರಣ ಪತ್ತೆಯಾದಾಗ ಸರಣಿಯೇ ಮೊಟಕುಗೊಳ್ಳುವ ಭೀತಿ ಹರಡಿತ್ತು. ಆದರೆ ದ್ರಾವಿಡ್ ಅವರು ನಿರ್ವಹಿಸಿದ ಪ್ರಮುಖ ಪಾತ್ರದಿಂದಾಗಿ ಸರಣಿಗೆ ಯಾವುದೇ ತಡೆ ಬೀಳಲಿಲ್ಲ ಎಂದು ಎಸ್‌ಎಲ್‌ಸಿ ಕೃತಜ್ಞತೆ ಸಲ್ಲಿಸಿದೆ. ದ್ರಾವಿಡ್ ಬಯಸಿದ್ದರೆ ತಂಡವನ್ನು ವಾಪಸ್ ತವರಿಗೆ ಕರೆದೊಯ್ಯಬಹುದಾಗಿತ್ತು. ಆದರೆ ಅವರು ಹಾಗೆ ಮಾಡದೆ ತಂಡವನ್ನು ಕಣಕ್ಕಿಳಿಸಿದರು ಎಂದು ಎಸ್‌ಎಲ್‌ಸಿ ಕಾರ್ಯದರ್ಶಿ ಮೋಹನ್ ಡಿಸಿಲ್ವ ಹೇಳಿದ್ದಾರೆ.

    ಭಾರತ ತಂಡ ಪ್ರವಾಸದಲ್ಲಿ 4 ಪಂದ್ಯ ಆಡಿದ ಬಳಿಕ ಕೃನಾಲ್ ಪಾಂಡ್ಯ ಕರೊನಾ ಸೋಂಕಿತರಾಗಿದ್ದರೆ, ಇತರ 9 ಆಟಗಾರರು ಐಸೋಲೇಷನ್‌ಗೆ ಒಳಗಾಗಿದ್ದರು. ಇದರಿಂದಾಗಿ ಭಾರತ ತಂಡಕ್ಕೆ ಕಣಕ್ಕಿಳಿಸಲು ಭರ್ತಿ 11 ಆಟಗಾರರಷ್ಟೇ ಲಭ್ಯವಿದ್ದರು.

    107 ಕೋಟಿ ರೂ. ಆದಾಯ
    ಸರಣಿಯ ಎಲ್ಲ ಪಂದ್ಯಗಳನ್ನು ಆಡಿದ್ದರಿಂದ ಲಂಕಾ ಮಂಡಳಿಗೆ 107 ಕೋಟಿ ರೂ. (280 ಕೋಟಿ ಶ್ರೀಲಂಕಾ ರೂಪಾಯಿ) ಆದಾಯ ಲಭಿಸಿತು. ಸದ್ಯದ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇದು ದೊಡ್ಡ ಬಲ ತುಂಬಿದೆ. ಮೊದಲಿಗೆ 3 ಪಂದ್ಯಗಳಿದ್ದ ಪ್ರವಾಸದಲ್ಲಿ 6 ಪಂದ್ಯ ಆಡಲು ಸಮ್ಮತಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಷಾ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮೋಹನ್ ಡಿಸಿಲ್ವ ಹೇಳಿದ್ದಾರೆ.

    ಲಾರ್ಡ್ಸ್ ಟೆಸ್ಟ್‌ನಲ್ಲಿ ಚೆಂಡು ವಿರೂಪ, ಆಂಗ್ಲರ ವಿರುದ್ಧ ಆರೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts