ಪಾಕಿಸ್ತಾನದ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದು ಬೀಗಿದ ಬಾಂಗ್ಲಾ; ಕಮರಿತು ಆತಿಥೇಯರ WTC ಕನಸು

Pak Vs Ban
Published on

ರಾವಲ್ಪಿಂಡಿ: ಇಲ್ಲಿನ ರಾವಲ್ಪಿಂಡಿ ಕ್ರಿಕೆಟ್​ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ತಂಡವು ಆತಿಥೇಯರ ವಿರುದ್ಧ ಮೇಲುಗೈ ಸಾಧಿಸಿದ್ದು, ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಾಂಗ್ಲಾದೇಶ ತಂಡವು ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನ ತಮಡವು ಮೊದಲ ಇನ್ನಿಂಗ್ಸ್​ನಲ್ಲಿ 274 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 172 ರನ್​ಗಳಿಸಿ ಆಲೌಟ್​ ಆಯಿತು. ಇದಕ್ಕುತ್ತರವಾಗಿ ಆಡಿದ ಬಾಂಗ್ಲಾದೇಶ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 262 ರನ್, ಎರಡನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 185 ರನ್​ ಗಳಿಸಿ ಗೆಲುವಿನ ನಗೆ ಬೀರುವ ಮೂಲಕ ಆತಿಥೇಯರಿಗೆ ಭಾರೀ ಮುಖಭಂಗವನ್ನುಂಟು ಮಾಡಿತು.

ಬಾಂಗ್ಲಾದೇಶ ತಂಡವು ಈವರೆಗೆ 144 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 10 ಟೆಸ್ಟ್ ಸರಣಿಗಳನ್ನು ಮಾತ್ರ ಎಂಬುದು ವಿಶೇಷ. 2005 ರಲ್ಲಿ ಜಿಂಬಾಬ್ವೆ ತಂಡವನ್ನು 1-0 ಅಂತರದಿಂದ ಮಣಿಸಿ ಬಾಂಗ್ಲಾದೇಶ್ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಇದಾದ ಬಳಿಕ 2009 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2-0 ಅಂತರದಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಇದು ಬಾಂಗ್ಲಾ ತಂಡದ ಮೊದಲ ವಿದೇಶಿ ಟೆಸ್ಟ್ ಸರಣಿ ಗೆಲುವು ಎಂಬುದು ವಿಶೇಷ.

ಇದಾದ ಬಳಿಕ 2015ರಲ್ಲಿ ಜಿಂಬಾಬ್ವೆ, 2019ರಲ್ಲಿ ವೆಸ್ಟ್ ಇಂಡೀಸ್, 2020ರಲ್ಲಿ ಜಿಂಬಾಬ್ವೆ ಹಾಗೂ 2021-22ರಲ್ಲಿ ಜಿಂಬಾಬ್ವೆ ವಿರುದ್ಧ ಹಾಗೂ 2022-23ರಲ್ಲಿ ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ ವಿರುದ್ಧ  ಟೆಸ್ಟ್​ ಸರಣಿಗಳನ್ನು ಬಾಂಗ್ಲಾದೇಶ ಗೆದ್ದುಕೊಂಡಿದೆ. ಇದೀಗ ಪಾಕಿಸ್ತಾನದ ನೆಲದಲ್ಲಿ ಟೆಸ್ಟ್​ ಸರಣಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿರುವ ಬಾಂಗ್ಲಾದೇಶ ಆತಿಥೇಯರ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಆಸೆಯನ್ನು ಹೊಸಕಿಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net