ನನ್ನ ಬಗ್ಗೆ ಮಾತಾಡಿದ್ರೆ, ನಿನ್ನ ಬೆತ್ತಲೆಗೊಳಿಸಿ ಮೆರವಣಿಗೆ ಮಾಡ್ತೇನೆ: ಕೈ​ ಶಾಸಕನ ಹೇಳಿಕೆ ವೈರಲ್​

Raju Kage
Published on

ಬೆಳಗಾವಿ: ನನ್ನ ತಂಟೆಗೆ ಬಂದರೆ ನಿನ್ನ ಬೆತ್ತಲೆಗೊಳಿಸಿ, ಮೆರವಣಿಗೆ ಮಾಡ್ತೀನಿ ಎಂದು ಕಾಗವಾಡದ ಶಾಸಕ ರಾಜು ಕಾಗೆ ಬಿಜೆಪಿ ನಾಯಕರೊಬ್ಬರಿಗೆ ವೇದಿಕೆಯಲ್ಲೇ ವಾರ್ನ್​ ಮಾಡಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಬೆಳಗಾವಿಯ ಕಾಗವಾಡ ವಿಧಾನಸಭಾ ಕ್ಷೇತ್ರದ ಐನಾಪುರದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್​ ಶಾಸಕ ರಾಜು ಕಾಗೆ ಮಾಜಿ ಸಚಿವ ಶ್ರೀಮಂತ್​ ಪಾಟೀಲ್​​​ಗೆ ಎಚ್ಚರಿಕೆ ನೀಡಿದ್ದು, ಇದು ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಇಬ್ಬರು ನಾಯಕರ ಜಗಳವು ವೇದಿಕೆಯಲ್ಲೇ ಜನರೆದುರು ವಾರ್ನ್‌ ಮಾಡುವ ಮಟ್ಟಕ್ಕೆ ಬಂದು ನಿಂತಿರುವುದು ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ವೈರಲ್​ ವಿಡಿಯೋದಲ್ಲೇನಿದೆ?

ನನ್ನ ಬಗ್ಗೆ ಮಾತನಾಡಲು ನಿನಗೆ ಯೋಗ್ಯೆತೆ ಇಲ್ಲ. ನೀನು ನನ್ನ ಬಗ್ಗೆ ಮಾತನಾಡ ಬೇಡ, ಅಪ್ಪಿ-ತಪ್ಪಿ ಮಾತನಾಡಿದರೆ ನಾನು ನಿನ್ನ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇನೆ. ನೀನು ಬಹಳ ಸತ್ಯ ಹರಿಶ್ಚಂದ್ರ ತರಹ ಮಾತನಾಡುತ್ತಿದ್ದೀಯಾ. ನಿಮ್ಮ ಕಾರ್ಖಾನೆಯಲ್ಲಿ ಕಾಟಾ ಯಾರು ಹೊಡೆದ್ರಿ ಕಾರ್ಮಿಕರ ದುಡ್ಡಿನಲ್ಲಿ ಹುಟ್ಟು ಹಬ್ಬ ಆಚರಿಸಿದವರು ಯಾರು ಎಂಬುದು ನನಗೆ ಗೊತ್ತು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಶ್ರೀಮಂತ್​ ಪಾಟೀಲ್​ ಹೆಸರೇಳದೆ ಗುಡುಗಿದ್ದಾರೆ.

ಮಾಜಿ ಸಚಿವ ಶ್ರೀಮಂತ ಪಾಟೀಲ್ ಈ ಹಿಂದೆ ರಾಜು ಕಾಗೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ರಾಜು ಕಾಗೆ ಮಾಜಿ ಸಚಿವ ಶ್ರೀಮಂತ್​ ಪಾಟೀಲ್​ ವಿರುದ್ಧ ಹರಿಹಾಯ್ದಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಕಿತ್ತಾಟ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net