

ಢಾಕಾ: ಬಾಂಗ್ಲಾದೇಶ ತಂಡದ ಆರಂಭಿಕ ಮೊಹಮದ್ ನೈಮ್ ಶೇಕ್ ಕೆಂಡದ ಮೇಲೆ ನಡೆದಿದ್ದಾರೆ! ಇದು ಯಾವುದೇ ನಂಬಿಕೆ ಅಥವಾ ಮೂಢನಂಬಿಕೆಯ ಭಾಗವಾಗಿಲ್ಲ. ಬದಲಾಗಿ ಏಷ್ಯಾಕಪ್ಗೆ ಅವರ ಮಾನಸಿಕ ಸಿದ್ಧತೆಯ ಭಾಗವಾಗಿದೆ!
ಹೌದು, ಬಾಂಗ್ಲಾದೇಶ ತಂಡದ ಮ್ಯಾನೇಜರ್ ಸ್ೈ ಅಹ್ಮದ್ ಸಾಮಾಜಿಕ ಜಾಲತಾಣದಲ್ಲಿ, 23 ವರ್ಷದ ಬ್ಯಾಟರ್ ನೈಮ್ ಶೇಕ್ ಕೆಂಡದ ಮೇಲೆ ಯಾವುದೇ ಭೀತಿ ಇಲ್ಲದೆ ನಡೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಈ ವಿಷಯವನ್ನು ತಿಳಿಸಿದ್ದಾರೆ. ನೈಮ್ ಶೇಕ್ ಬಾಂಗ್ಲಾ ಪರ ಇದುವರೆಗೆ 1 ಟೆಸ್ಟ್, 4 ಏಕದಿನ ಮತ್ತು 35 ಟಿ20 ಪಂದ್ಯ ಆಡಿದ್ದಾರೆ.
ಶೇಕ್ ನೈಮ್ ಅವರ ಈ ಕೆಂಡದ ಮೇಲಿನ ನಡಿಗೆ ಎಷ್ಟರ ಮಟ್ಟಿಗೆ ಯಶ ತಂದುಕೊಡಲಿದೆ ಎಂಬುದು ಏಷ್ಯಾಕಪ್ನಲ್ಲಿ ಗೊತ್ತಾಗಲಿದೆ.