

ಕಿಂಗ್ಸ್ಟೌನ್: ಶಕೀಬ್ ಅಲ್ ಹಸನ್ (64*ರನ್, 46 ಎಸೆತ, 9 ಬೌಂಡರಿ) ಅರ್ಧಶತಕ ಮತ್ತು ಬೌಲರ್ಗಳ ಸಂಟಿತ ದಾಳಿಯ ಬಲದಿಂದ ಬಾಂಗ್ಲಾದೇಶ ತಂಡ ಐಸಿಸಿ ಟಿ20 ವಿಶ್ವಕಪ್ನಲ್ಲಿ ನೆದರ್ಲೆಂಡ್ ಎದುರು 25 ರನ್ಗಳಿಂದ ಗೆದ್ದು ಸೂಪರ್-8 ಪ್ರವೇಶ ಅವಕಾಶ ವೃದ್ಧಿಸಿಕೊಂಡಿದೆ.
ಅನೋರ್ಸ್ ವೇಲ್ ಗ್ರೌಂಡ್ನಲ್ಲಿ ಗುರುವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾ ಆರಂಭಿಕ ಆಘಾತ ಎದುರಿಸಿದರೂ, ಶಕೀಬ್ ಹೋರಾಟದಿಂದ 5 ವಿಕೆಟ್ಗೆ 159 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಬಾಂಗ್ಲಾ ಕೊನೇ 5 ಓವರ್ಗಳಲ್ಲಿ 54 ರನ್ ದೋಚಿತು. ಪ್ರತಿಯಾಗಿ ನೆದರ್ಲೆಂಡ್, ಸ್ಪಿನ್ನರ್ ರಿಷದ್ ಹೊಸೈನ್ (33ಕ್ಕೆ 3) ದಾಳಿಗೆ ನಲುಗಿ 8 ವಿಕೆಟ್ಗೆ 134 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೇ 6 ಓವರ್ಗಳಲ್ಲಿ ಡಚ್ಚರು 30 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಲಯತಪ್ಪಿದರು.
ಮಳೆ ಅಡಚಣೆ: ಮಳೆಯಿಂದಾಗಿ ಪಂದ್ಯದ ಟಾಸ್ ವಿಳಂಬಗೊಂಡಿತು. ಆದರೆ ಬಳಿಕ ಟಾಸ್ ಅರ್ಧಗಂಟೆ ತಡವಾಗಿ ನಡೆದರೂ, ಆಟ 15 ನಿಮಿಷಗಳಲ್ಲೇ ಶುರುವಾಯಿತು.
ಬಾಂಗ್ಲಾದೇಶ: 5 ವಿಕೆಟ್ಗೆ 159 (ತಂಜಿದ್ 35, ಶಾಂಟೊ 1, ಲಿಟನ್ 1, ಶಕೀಬ್ 64*, ಮಹಮುದುಲ್ಲಾ 25, ಆರ್ಯನ್ ದತ್ತ 17ಕ್ಕೆ 2, ಮೀಕೆರೆನ್ 15ಕ್ಕೆ 2). ನೆದರ್ಲೆಂಡ್ಸ್: 8 ವಿಕೆಟ್ಗೆ 134 (ಲೆವಿಟ್ 18, ವಿಕ್ರಮ್ಜಿತ್ 26, ಎಂಗೆಲ್ಬ್ರೆಚ್ 33, ಎಡ್ವರ್ಡ್ಸ್ 25, ಆರ್ಯನ್ 15*, ಹೊಸೈನ್ 33ಕ್ಕೆ 3, ಟಸ್ಕಿನ್ ಅಹ್ಮದ್ 30ಕ್ಕೆ 2, ಮುಸ್ತಾಫಿಜುರ್ 12ಕ್ಕೆ 1, ತಂಜಿಮ್ 23ಕ್ಕೆ 1).
ಶ್ರೀಲಂಕಾ ಅಧಿಕೃತವಾಗಿ ನಿರ್ಗಮನ
ಬಾಂಗ್ಲಾ ಜಯದೊಂದಿಗೆ ಮಾಜಿ ಚಾಂಪಿಯನ್ ಶ್ರೀಲಂಕಾ ತಂಡ ಮೊದಲ ಸುತ್ತಿನಲ್ಲೇ ಹೊರಬೀಳುವುದು ಖಚಿತವೆನಿಸಿದೆ. ಇನ್ನು ಲಂಕಾ ತನ್ನ ಕೊನೇ ಪಂದ್ಯದಲ್ಲಿ ನೆದರ್ಲೆಂಡ್ ಎದುರು ಗೆದ್ದರೂ ಸೂಪರ್-8 ಹಂತಕ್ಕೇರದು. ಆದರೆ ನೆದರ್ಲೆಂಡ್ ಕೊನೇ ಪಂದ್ಯ ಗೆದ್ದರೆ (ಬಾಂಗ್ಲಾ ಕೊನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಹೀನಾಯವಾಗಿ ಸೋತರೆ) ಸೂಪರ್-8 ಪ್ರವೇಶಿಸುವ ಅವಕಾಶ ಹೊಂದಿದೆ.