More

    ಐಪಿಎಲ್​ ಬ್ರ್ಯಾಂಡ್​ ಮೌಲ್ಯ ಶೇ. 6.3 ಪ್ರಗತಿ; ತಂಡಗಳಲ್ಲಿ ಆರ್​ಸಿಬಿಗೆ 2ನೇ ಗರಿಷ್ಠ ಮೌಲ್ಯ!

    ನವದೆಹಲಿ: ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್​ ಟೂರ್ನಿ ಎನಿಸಿದ ಇಂಡಿಯನ್​ ಪ್ರೀಮಿಯರ್​ ಲೀಗ್​ನ (ಐಪಿಎಲ್​) ಬ್ರ್ಯಾಂಡ್​ ಮೌಲ್ಯ 2024ರಲ್ಲಿ ಶೇ. 6.3 ಏರಿಕೆ ಕಂಡಿದ್ದು, 28,420 ಕೋಟಿ ರೂ. (3.4 ಶತಕೋಟಿ ಡಾಲರ್​) ತಲುಪಿದೆ. ಐಪಿಎಲ್​ ವ್ಯಾಪಾರ ಮೌಲ್ಯ ಕೂಡ ಕಳೆದ ವರ್ಷಕ್ಕಿಂತ ಶೇ.6.5 ಪ್ರಗತಿಯಾಗಿದ್ದು, 1,37,075 ಕೋಟಿ ರೂ.ಗೆ (16.4 ಶತಕೋಟಿ ಡಾಲರ್​) ಏರಿದೆ ಎಂದು ಅಮೆರಿಕದ ಹೂಡಿಕೆ ಬ್ಯಾಂಕ್​ “ಹೌಲಿಹಾನ್​ ಲೋಕಿ’ಯ ಅಧ್ಯಯನ ವರದಿ ತಿಳಿಸಿದೆ.

    2022ರಲ್ಲಿ ಡಿಸ್ನಿಸ್ಟಾರ್​ ಮತ್ತು ವಯಾಕಾಮ್​18 ಜತೆಗೆ ಐಪಿಎಲ್​ ಮಾಡಿಕೊಂಡ 48 ಸಾವಿರ ಕೋಟಿ ರೂ. ಮೊತ್ತದ ಮಾಧ್ಯಮ ಹಕ್ಕು ಒಪ್ಪಂದ ಮತ್ತು 2023ರಲ್ಲಿ ಟಾಟಾ ಜತೆಗೆ ಮಾಡಿಕೊಂಡ 2,500 ಕೋಟಿ ರೂ. ಮೊತ್ತದ ಶೀರ್ಷಿಕೆ ಪ್ರಾಯೋಜಕತ್ವ ಒಪ್ಪಂದದಿಂದಾಗಿ ಐಪಿಎಲ್​ ಮೌಲ್ಯ ವೃದ್ಧಿಸಿದೆ ಎಂದು ಹೌಲಿಹಾನ್​ ಲೋಕಿ ವರದಿ ತಿಳಿಸಿದೆ.

    ಐಪಿಎಲ್​ ತಂಡಗಳ ಪೈಕಿ ಟೂರ್ನಿಯ ಅತ್ಯಂತ ಯಶಸ್ವಿ ತಂಡವೆನಿಸಿರುವ ಚೆನ್ನೈ ಸೂಪರ್​ಕಿಂಗ್ಸ್​ ಅತ್ಯಧಿಕ ಬ್ರಾ$್ಯಂಡ್​ ಮೌಲ್ಯ ಹೊಂದಿದೆ. ಕಳೆದ ವರ್ಷಕ್ಕಿಂತ ಶೇ.9 ಏರಿಕೆ ಕಂಡಿರುವ ಸಿಎಸ್​ಕೆ ಬ್ರ್ಯಾಂಡ್​​ ಮೌಲ್ಯ, 1,930 ಕೋಟಿ ರೂ. ತಲುಪಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೂರ್ನಿಯ 2ನೇ ಗರಿಷ್ಠ ಬ್ರಾ$್ಯಂಡ್​ ಮೌಲ್ಯ (1,896 ಕೋಟಿ ರೂ.) ಹೊಂದಿರುವ ತಂಡವಾಗಿದ್ದು, 2023ರಿಂದ ಶೇ.16.4 ಪ್ರಗತಿ ಕಂಡಿದೆ.
    2024ರ ಆವೃತ್ತಿಯ ಚಾಂಪಿಯನ್​ ಕೋಲ್ಕತ ನೈಟ್​ರೈಡರ್ಸ್​ ತಂಡ ಕಳೆದ ವರ್ಷಕ್ಕಿಂತ ಅತ್ಯಧಿಕ ಮೌಲ್ಯ ಪ್ರಗತಿ ಕಂಡಿರುವ ತಂಡವಾಗಿದೆ. ಕೆಕೆಆರ್​ ಶೇ.19.30 ಮೌಲ್ಯ ಪ್ರಗತಿ ಕಂಡಿದ್ದು, 1,805 ಕೋಟಿ ರೂ. ತಲುಪಿದೆ. 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ (1,704 ಕೋಟಿ ರೂ.) 4ನೇ ಸ್ಥಾನದಲ್ಲಿದೆ.

    See also  ಮನೆ- ಜಮೀನು ಖರೀದಿಸೋರಿಗೆ ಬೆಲ್ಲ; ಮಾರ್ಗಸೂಚಿ ಬೆಲೆ ವಿನಾಯಿತಿ ಮೂರು ತಿಂಗಳು ವಿಸ್ತರಣೆ

    ಐಪಿಎಲ್​ ತಂಡಗಳು ಟೂರ್ನಿಯ ಪ್ರಸಾರ ಹಕ್ಕು, ಪ್ರಯೋಜಕತ್ವ ಹಕ್ಕು ಮಾರಾಟ ಮೊತ್ತದ ಪಾಲಿನ ಜತೆಗೆ ಸ್ವಂತ ಪ್ರಾಯೋಜಕತ್ವ ಒಪ್ಪಂದಗಳಿಂದ 42ರಿಂದ 100 ಕೋಟಿ ರೂ.ವರೆಗೆ ಆದಾಯ ಗಳಿಸುತ್ತಿವೆ. ಕತಾರ್​ ಏರ್​ವೇಸ್​ ಜತೆಗೆ ಆರ್​ಸಿಬಿ ತಂಡ 3 ವರ್ಷಗಳಿಗೆ 75 ಕೋಟಿ ರೂ. ಮೊತ್ತದ ಒಪ್ಪಂದ ಹೊಂದಿದೆ ಎಂದು ವರದಿ ತಿಳಿಸಿದೆ.

    ಐಪಿಎಲ್​ ತಂಡಗಳ ಬ್ರ್ಯಾಂಡ್​ ಮೌಲ್ಯ
    ಚೆನ್ನೈ ಸೂಪರ್​ಕಿಂಗ್ಸ್​: 1,930 ಕೋಟಿ ರೂ.
    ಆರ್​ಸಿಬಿ (ಬೆಂಗಳೂರು): 1,896 ಕೋಟಿ ರೂ.
    ಕೋಲ್ಕತ ನೈಟ್​ರೈಡರ್ಸ್​: 1,805 ಕೋಟಿ ರೂ.
    ಮುಂಬೈ ಇಂಡಿಯನ್ಸ್​: 1,704 ಕೋಟಿ ರೂ. 
    ರಾಜಸ್ಥಾನ ರಾಯಲ್ಸ್​: 1,111 ಕೋಟಿ ರೂ.
    ಸನ್​ರೈಸರ್ಸ್​ ಹೈದರಾಬಾದ್​: 1,103 ಕೋಟಿ ರೂ.
    ಡೆಲ್ಲಿ ಕ್ಯಾಪಿಟಲ್ಸ್​: 1,094 ಕೋಟಿ ರೂ.
    ಗುಜರಾತ್​ ಟೈಟಾನ್ಸ್​: 1,036 ಕೋಟಿ ರೂ. 
    ಪಂಜಾಬ್​ ಕಿಂಗ್ಸ್​: 844 ಕೋಟಿ ರೂ. 
    ಲಖನೌ ಸೂಪರ್​ಜೈಂಟ್ಸ್​: 760 ಕೋಟಿ ರೂ.

    ಮಿಂಚಿದ ಅರ್ಷದೀಪ್​, ಸೂರ್ಯಕುಮಾರ್​; ಟಿ20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ಜಯದೊಂದಿಗೆ ಸೂಪರ್​-8 ಪ್ರವೇಶಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts