ಅವರಂತಹ ಎಕ್ಸ್‌ಪ್ರೆಸ್ ಬೌಲರ್‌ಗಳು ನಮ್ಮಲ್ಲಿಯೂ ಇದ್ದಾರೆ: ಬಾಂಗ್ಲಾ ಕ್ಯಾಪ್ಟನ್​ ಸೊಕ್ಕಿನ ಮಾತು | Mayank

bangaldesh
Published on

ಢಾಕಾ: ಕ್ರಿಕೆಟ್​ ಲೋಕದಲ್ಲಿ ಸದ್ಯ ಕೇಳಿಬರುತ್ತಿರುವುದು ಒಂದೇ ಹೆಸರು ಅದು ಟೀಮ್ ಇಂಡಿಯಾದ ವೇಗಿ ಮಯಾಂಕ್ ಯಾದವ್ (Mayank Yadav)​. ಪ್ರಸ್ತುತ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಯುವ ಬೌಲರ್​ ಮಯಾಂಕ್​​, ತನ್ನ ಮೊದಲ ಟಿ20 ಪಂದ್ಯದಲ್ಲಿಯೇ ಮೈಡನ್​ ಓವರ್​ ದಾಖಲಿಸಿದ ಭಾರತದ ಮೂರನೇ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ದಾಖಲೆ ನಿರ್ಮಿಸಿದ ಯುವ ಕ್ರಿಕೆಟಿಗನಾಗಿ ಹೊರಹೊಮ್ಮಿರುವ ಮಯಾಂಕ್​ಗೆ ಕ್ರಿಕೆಟ್ ಪ್ರೇಮಿಗಳು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದ್ರೆ, ಈ ಮಧ್ಯೆ ಸೋಲಿನಿಂದ ಕಂಗಾಲಾಗಿರುವ ಬಾಂಗ್ಲಾ ಆಟಗಾರರು (Bangaldesh Captain), ತಾವು ದುರಹಂಕಾರದ ಮಾತುಗಳಿಗೆ ನಿಸ್ಸೀಮರು ಎಂಬುದನ್ನು ಇದೀಗ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಅದ್ಭುತ ಸಾಮರ್ಥ್ಯ ಹೊಂದಿರುವ ಮಯಾಂಕ್ ಯಾದವ್, ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲಿಯೇ ಅಮೋಘ ಪ್ರದರ್ಶನ ತೋರಿದರು. ಈ ವಿಷಯ ಐಪಿಎಲ್​ ಫ್ರಾಂಚೈಸಿಗಳ ಗಮನಕ್ಕೆ ಬಂದಿದ್ದು, ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಮಯಾಂಕ್​ರನ್ನು ತಮ್ಮ ತಂಡಕ್ಕೆ ಕರೆದುಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಸದ್ಯ ಈ ಎಲ್ಲಾ ಬೆಳವಣಿಗೆಗಳ ನಡುವೆ ಮಯಾಂಕ್​ ಬೌಲಿಂಗ್ ಬಗ್ಗೆ ಮಾತನಾಡಿರುವ ಬಾಂಗ್ಲಾದೇಶದ ಕ್ಯಾಪ್ಟನ್​ ನಜ್ಮುಲ್ ಹೊಸೈನ್ ಶಾಂತೋ, ನಾವು ಯಾವ ಫಾಸ್ಟ್​ ಬೌಲರ್​ ಅನ್ನು ಎದುರಿಸುವ ಭಯವನ್ನು ಹೊಂದಿಲ್ಲ. ಆ ರೀತಿ ಬೌಲ್ ಮಾಡುವವರು ನಮ್ಮಲ್ಲಿಯೂ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

"ನೆಟ್ಸ್​ ತರಬೇತಿಯಲ್ಲಿ ನಮ್ಮ ಬೌಲರ್​ಗಳು ಅಷ್ಟೇ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಟೀಮ್ ಇಂಡಿಯಾದ ಮಯಾಂಕ್ ಯಾದವ್ ಅವರನ್ನು ಎದುರಿಸುವ ಬಗ್ಗೆ ನಮಗೆ ಯಾವ ಚಿಂತೆ ಇಲ್ಲ. ಅವರು ಉತ್ತಮ ಬೌಲರ್. ನಮ್ಮ ತಂಡದಲ್ಲಿ ಅವರಂತೆಯೇ ಸಾಕಷ್ಟು ಪ್ರತಿಭೆಗಳಿದ್ದಾರೆ. ನಮಗೆ ಬದಲಾವಣೆ ಮಾಡಿಕೊಳ್ಳುವ ಅವಕಾಶವಿದೆ ಮತ್ತು ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ತಯಾರಿಗಳನ್ನು ನಾವು ಮಾಡಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net