

ದುಬೈ: ಎಂಟು ಬಾರಿಯ ಚಾಂಪಿಯನ್ ಭಾರತ ತಂಡ 10ನೇ ಆವೃತ್ತಿಯ 19 ವಯೋಮಿತಿ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ 4 ವಿಕೆಟ್ಗಳಿಂದ ಆಘಾತಕಾರಿ ಸೋಲು ಅನುಭವಿಸಿದೆ. ಇದರೊಂದಿಗೆ ಮುಂದಿನ ವರ್ಷದ ಕಿರಿಯರ ವಿಶ್ವಕಪ್ ಪೂರ್ವಸಿದ್ಧತೆಯಲ್ಲಿ ಭಾರತ ಹಿನ್ನಡೆ ಅನುಭವಿಸಿದೆ.
ಐಸಿಸಿ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ನಡೆದ ಉಪಾಂತ್ಯ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡ 42.4 ಓವರ್ಗಳಲ್ಲಿ 188 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಬಾಂಗ್ಲಾ ಆರಂಭಿಕ ಆಘಾತ ಎದುರಿಸಿದರೂ, ಅರಿುಲ್ ಇಸ್ಲಾಂ (94) ಮತ್ತು ಅಹ್ರಾರ್ ಅಮಿನ್ (44) ಹೋರಾಟದಿಂದ 42.5 ಓವರ್ಗಳಲ್ಲಿ 6 ವಿಕೆಟ್ಗೆ 189 ರನ್ ಪೇರಿಸಿ ಜಯಿಸಿತು.
ಭಾರತ: 42.4 ಓವರ್ಗಳಲ್ಲಿ 188 (ಪ್ರಿಯಾಂಶು 19, ಉದಯ್ 0, ಮುಶೀರ್ ಖಾನ್ 50, ಎಂ. ಅಭಿಷೇಕ್ 62, ಮರ್ು ಮೃಧ 41ಕ್ಕೆ 4, ಬೊರ್ಸೊನ್ 39ಕ್ಕೆ 2, ಜಿಬೋನ್ 29ಕ್ಕೆ 2). ಬಾಂಗ್ಲಾದೇಶ: 42.5 ಓವರ್ಗಳಲ್ಲಿ 6 ವಿಕೆಟ್ಗೆ 189 (ಆರಿುಲ್ ಇಸ್ಲಾಂ 94, ಅಹ್ರಾರ್ ಅಮಿನ್ 44, ನಮನ್ 35ಕ್ಕೆ 3, ಲಿಂಬಾನಿ 47ಕ್ಕೆ 2).
ಪಾಕ್ಗೂ ಶಾಕ್
ಲೀಗ್ ಹಂತದಲ್ಲಿ ಭಾರತಕ್ಕೆ ಸೋಲುಣಿಸಿ ಎ ಗುಂಪಿನ ಅಗ್ರಸ್ಥಾನ ಸಂಪಾದಿಸಿದ್ದ ಪಾಕ್, ಮತ್ತೊಂದು ಸೆಮಿಫೈನಲ್ನಲ್ಲಿ ಬಿ ಗುಂಪಿನ 2ನೇ ಸ್ಥಾನಿ ಯುಎಇ ವಿರುದ್ಧ 11 ರನ್ಗಳಿಂದ ಆಘಾತಕಾರಿ ಸೋಲು ಅನುಭವಿಸಿತು. ಬಾಂಗ್ಲಾ-ಯುಎಇ ಫೈನಲ್ ಪ್ರವೇಶದಿಂದಾಗಿ ಕಿರಿಯರ ಏಷ್ಯಾಕಪ್ನಲ್ಲಿ ಮೊದಲ ಬಾರಿಗೆ ಭಾರತ (8), ಪಾಕ್ (1), ಅಫ್ಘಾನಿಸ್ತಾನ (1) ಹೊರತಾದ ತಂಡವೊಂದು ಚಾಂಪಿಯನ್ ಪಟ್ಟವೇರುವುದು ಖಚಿತಗೊಂಡಿದೆ.
ಫೈನಲ್ ಪಂದ್ಯ
ಯುಎಇ-ಬಾಂಗ್ಲಾದೇಶ
ಯಾವಾಗ: ಭಾನುವಾರ
ಆರಂಭ: ಬೆಳಗ್ಗೆ 11.00