

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದೇಶೀಯ ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಲೀಗ್ ಹಂತ ಮುಕ್ತಾಯಗೊಂಡಿದ್ದು, ನಾಕೌಟ್ ಪಂದ್ಯಗಳು ಡಿಸೆಂಬರ್ 9ರಿಂದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ಆತಿಥೇಯ ಕರ್ನಾಟಕ ತಂಡ ನಾಕೌಟ್ ಹಂತಕ್ಕೇರದಿರುವುದು ಮಾತ್ರ ನಿರಾಸೆಯ ವಿಷಯವಾಗಿದೆ.
ಮಧ್ಯಪ್ರದೇಶ (ಎ1), ಸೌರಾಷ್ಟ್ರ (ಬಿ2), ಬರೋಡ (ಬಿ1), ಮುಂಬೈ (ಇ1), ವಿದರ್ಭ (ಡಿ1) ಮತ್ತು ದೆಹಲಿ (ಸಿ1) ತಂಡಗಳು ನೇರವಾಗಿ ಕ್ವಾರ್ಟರ್ಫೈನಲ್ಗೇರಿದ್ದರೆ, ಬಂಗಾಳ (ಎ2), ಚಂಡೀಗಢ (ಡಿ2), ಆಂಧ್ರ (ಇ2), ಉತ್ತರ ಪ್ರದೇಶ (ಸಿ2) ತಂಡಗಳು ಪ್ರಿ ಕ್ವಾರ್ಟರ್ಫೈನಲ್ನಲ್ಲಿ ಆಡಲಿವೆ. ಡಿಸೆಂಬರ್ 13ರಂದು 2 ಸೆಮಿಫೈನಲ್ಸ್ ಮತ್ತು ಡಿಸೆಂಬರ್ 15ರಂದು ಫೈನಲ್ ಪಂದ್ಯ ನಡೆಯಲಿದೆ.
ನಾಕೌಟ್ ವೇಳಾಪಟ್ಟಿ: ಪ್ರಿ ಕ್ವಾರ್ಟರ್ಫೈನಲ್ಸ್: ಬೆಳಗ್ಗೆ 11: ಬಂಗಾಳ-ಚಂಡೀಗಢ, ಆರಂಭ: ಸಂಜೆ 4.30: ಆಂಧ್ರ-ಉತ್ತರ ಪ್ರದೇಶ; ಕ್ವಾರ್ಟರ್ಫೈನಲ್ಸ್: ಬೆಳಗ್ಗೆ 9: ಮಧ್ಯಪ್ರದೇಶ-ಸೌರಾಷ್ಟ್ರ, ಬೆಳಗ್ಗೆ 11: ಬರೋಡ-ಪ್ರಿ ಕ್ವಾರ್ಟರ್ ವಿಜೇತರು; ಮಧ್ಯಾಹ್ನ 1.30: ಮುಂಬೈ-ವಿದರ್ಭ, ಸಂಜೆ 4.30: ದೆಹಲಿ-ಪ್ರಿ ಕ್ವಾರ್ಟರ್ ವಿಜೇತರು.