'ಜಿಮ್ಮಿ' ನಿವೃತ್ತಿ ಬೆನ್ನಲ್ಲೇ ಬಾಬರ್​ ಆಜಂ ಟ್ವೀಟ್ ​ಡಿಲೀಟ್​! ಮತ್ತೊಂದು ಪೋಸ್ಟ್​ನಲ್ಲಿ ಗೊತ್ತಾಯ್ತು ಅಸಲಿ ಕಾರಣ

ವಿಜಯವಾಣಿ
Published on

ಲಂಡನ್​: 2004ರಲ್ಲಿ ಇಂಗ್ಲೆಂಡ್​ ತಂಡಕ್ಕೆ ಯುವ ಬೌಲರ್ ಆಗಿ ಸೇರ್ಪಡೆಗೊಂಡ ಜೇಮ್ಸ್ ಆ್ಯಂಡರ್ಸನ್, ತಮ್ಮ ಆಕರ್ಷಕ ಬೌಲಿಂಗ್​ ಸ್ಕಿಲ್ಸ್​​ ಮೂಲಕ ಎದುರಾಳಿಗಳ ವಿಕೆಟ್​ ಕಿತ್ತು, ಟೀಮ್​ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಸ್ಟಾರ್​ ವೇಗಿ. ಆಂಗ್ಲರ ಕ್ರಿಕೆಟ್​ಗೆ ಅಪಾರ ಕೊಡುಗೆ ನೀಡಿದ್ದ ಜೇಮ್ಸ್​, ಶುಕ್ರವಾರ (ಜು.12) ತಮ್ಮ 20 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದರು.

ವಿಶ್ವ ಕಂಡ ಅತ್ಯುತ್ತಮ ಸೀಮ್ ಬೌಲರ್‌ಗಳಲ್ಲಿ ಒಬ್ಬರಾದ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ತಮ್ಮ ವೃತ್ತಿಜೀವನಕ್ಕೆ ಭಾವಪೂರ್ಣ ವಿದಾಯ ಘೋಷಿಸುತ್ತಿದ್ದಂತೆ ಇತರೆ ದೇಶದ ಸ್ಟಾರ್​ ಆಟಗಾರರು ಮತ್ತು ಮಾಜಿ ಕ್ರಿಕೆಟಿಗರು ಧನ್ಯವಾದ ತಿಳಿಸಿದರು. ಪಾಕಿಸ್ತಾನ ಪುರುಷರ ತಂಡದ ನಾಯಕ ಬಾಬರ್ ಆಜಂ, ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದ ಜೇಮ್ಸ್ ಅವರಿಗೆ ಅಭಿನಂದನೆ ಸಲ್ಲಿಸಲು ಮಾಡಿದ ಟ್ವೀಟ್​ ಅನ್ನು ಕ್ಷಣಮಾತ್ರದಲ್ಲಿ ಡಿಲೀಟ್​ ಮಾಡಿ, ಮತ್ತೊಂದು ಪೋಸ್ಟ್​ ಹಂಚಿಕೊಂಡಿದ್ದು ಸದ್ಯ ನೆಟ್ಟಿಗರ ಲೇವಡಿಗೆ ಕಾರಣವಾಗಿದೆ.

ಆ್ಯಂಡರ್ಸನ್ ನಿವೃತ್ತಿ ಘೋಷಣೆ ವೇಳೆ ತೆಗೆಯಲಾದ ಫೋಟೋವನ್ನು ಬಳಸಿ, ಅದಕ್ಕೆ "ನಿಮ್ಮ ಕಟರ್‌ಗಳನ್ನು ಎದುರಿಸುವುದೇ ಒಂದು ವಿಶೇಷವಾಗಿತ್ತು ಜಿಮ್ಮಿ. ಇಂತಹ ಕ್ರೀಡೆಯಲ್ಲಿ ನಿಮ್ಮ ಉಪಸ್ಥಿತಿ ಇನ್ನುಂದೆ ಇರುವುದಿಲ್ಲ ಎಂಬುದೇ ಬೇಸರ. ಕ್ರಿಕೆಟ್​ಗೆ ನೀವು ಕೊಟ್ಟ ಕೊಡುಗೆ ಅವಿಸ್ಮರಣಿಯ. ನಿಮ್ಮ ಬಗ್ಗೆ ಅಪಾರ ಗೌರವವಿದೆ GOAT" ಎಂದು ಬರೆದು ಪೋಸ್ಟ್ ಮಾಡಿದ್ದರು. ಇದನ್ನು ಹಂಚಿಕೊಳ್ಳುತ್ತಿದ್ದಂತೆ ಡಿಲೀಟ್ ಮಾಡಿದ ಬಾಬರ್​, ಇದನ್ನೇ ಮೊತ್ತೊಂದು ಬಾರಿ ಹೊಸದಾಗಿ ಪೋಸ್ಟ್ ಮಾಡಿದ್ದಾರೆ. ಆದ್ರೆ, ಒಂದೇ ಒಂದು ಪದವನ್ನು ಬದಲಾಯಿಸಿ ಹಂಚಿಕೊಂಡಿದ್ದಾರೆ.

ಅಸಲಿಗೆ ನಿಮ್ಮ ಕಟರ್​ಗಳನ್ನು ಎಂದು ಮೊದಲ ಪೋಸ್ಟ್​ನಲ್ಲಿ ತಪ್ಪಾಗಿ ಬರೆದಿದ್ದ ಬಾಬರ್​, ಎರಡನೇ ಪೋಸ್ಟ್​ನಲ್ಲಿ ಸ್ವಿಂಗ್​ ಎಂಬ ಪದವನ್ನು ಬಳಸುವ ಮೂಲಕ ಸರಿಪಡಿಸಿ ಹಂಚಿಕೊಂಡರು. ಇದನ್ನು ಸ್ಕ್ರೀನ್​ಶಾಟ್​ ತೆಗೆದುಕೊಂಡ ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇ ತಡ ಬಾಬರ್​ ಆಜಂ ಪೋಸ್​​ ವ್ಯಾಪಕವಾಗಿ ಹರಿದಾಡಿದೆ. ಪಾಕ್​ ಕ್ಯಾಪ್ಟನ್​ರನ್ನು ಬೆಂಬಿಡದ ನೆಟ್ಟಿಗರು ಇಲ್ಲಿಯೂ ಟೀಕೆ, ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net