ಆಸೀಸ್​ ವಿರುದ್ಧ ಕೊನೇ ಟಿ20ಯಲ್ಲೂ ಪರಾಭವ; ಭಾರತದ ಮಹಿಳೆಯರಿಗೆ ಸರಣಿ ಸೋಲು

womens t20 web
Published on

ಮುಂಬೈ: ವಿಕೆಟ್​ ಕೀಪರ್​-ಬ್ಯಾಟರ್​ ರಿಚಾ ಘೋಷ್​ (34 ರನ್​, 28 ಎಸೆತ, 2 ಬೌಂಡರಿ, 3 ಸಿಕ್ಸರ್​) ಬಿರುಸಿನ ಆಟವಾಡಿ ಮೊತ್ತ ಏರಿಸಿದ ನಡುವೆಯೂ ಭಾರತ ತಂಡ ಮಹಿಳೆಯರ ಟಿ20 ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೆಲಿಯಾ ಎದುರು 7 ವಿಕೆಟ್​ಗಳಿಂದ ಶರಣಾಗಿದೆ. ಇದರೊಂದಿಗೆ ಹರ್ಮಾನ್​ಪ್ರೀತ್​ ಕೌರ್​ ಪಡೆ 1-2ರಿಂದ ಸರಣಿ ಸೋಲು ಅನುಭವಿಸಿದೆ. ಸರಣಿಯ ಆರಂಭಿಕ ಪಂದ್ಯ ಗೆದ್ದಿದ್ದ ಭಾರತ ನಂತರದಲ್ಲಿ ಲಯ ತಪ್ಪಿತು.

ಡಾ. ಡಿವೈ ಪಾಟೀಲ್​ ಅಕಾಡೆಮಿ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ, ಒಂದು ಹಂತದಲ್ಲಿ 66 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಪರದಾಡಿತು. ಬಳಿಕ ರಿಚಾ ಸಾಹಸದಿಂದ 6 ವಿಕೆಟ್​ಗೆ 147 ರನ್​ ಪೇರಿಸುವಲ್ಲಿ ಸಲವಾಯಿತು. ಆದರೆ ಆಸೀಸ್​ ನಾಯಕಿ ಅಲಿಸ್ಸಾ ಹೀಲಿ (55 ರನ್​, 38 ಎಸೆತ, 9 ಬೌಂಡರಿ, 1 ಸಿಕ್ಸರ್​) ಪವರ್​ಪ್ಲೇನಲ್ಲಿ ಬಿರುಸಿನ ಆಟವಾಡಿ ಗೆಲುವಿನ ಹಾದಿ ಸುಗಮಗೊಳಿಸಿದರು. ಅಂತಿಮವಾಗಿ ಆಸೀಸ್​ 18.4 ಓವರ್​ಗಳಲ್ಲಿ 3 ವಿಕೆಟ್​ಗೆ 149 ರನ್​ ಗಳಿಸಿ ಗೆಲುವಿನ ದಡ ಸೇರಿತು.

ಭಾರತ: 6 ವಿಕೆಟ್​ಗೆ 147 (ಶೆಫಾಲಿ 26, ಸ್ಮೃತಿ 29, ಜೆಮೀಮಾ 2, ಹರ್ಮಾನ್​ಪ್ರೀತ್​ 3, ರಿಚಾ 34, ದೀಪ್ತಿ 14, ಅಮನ್​ಜೋತ್​ 17*, ಪೂಜಾ 7*, ಸುದರ್​ಲ್ಯಾಂಡ್​ 12ಕ್ಕೆ 2, ವರೆಹ್ಯಾಂ 24ಕ್ಕೆ 2). ಆಸ್ಟ್ರೆಲಿಯಾ: 18.4 ಓವರ್​ಗಳಲ್ಲಿ 3 ವಿಕೆಟ್​ಗೆ 149 (ಅಲಿಸ್ಸಾ ಹೀಲಿ 55, ಬೆತ್​ ಮೂನಿ 52*, ತಹ್ಲಿಯಾ 20, ಲಿಚ್​ಫೀಲ್ಡ್​ 17*, ಪೂಜಾ 26ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net