VIDEO: ಅಭ್ಯಾಸ ಆರಂಭಿಸಿದ ಆಸೀಸ್​ ಮಹಿಳಾ ಆಲ್ರೌಂಡರ್​ ಎಲ್ಲಿಸ್​ ಪೆರ್ರಿ

perry for web
Published on

ಬೆಂಗಳೂರು: ಕಳೆದ ಐದು ತಿಂಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ಆಸ್ಟ್ರೆಲಿಯಾದ ಆಲ್ರೌಂಡರ್​ ಎಲ್ಲಿಸ್​ ಪೆರ್ರಿ ಪೂರ್ಣಪ್ರಯಾಣದಲ್ಲಿ ಬುಧವಾರವಾರದಿಂದ ಅಭ್​ಉಆಸ ಆರಂಭಿಸಿದರು. 29 ವರ್ಷದ ಪೆರ್ರಿ, ತವರಿನಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿ ವೇಳೆ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಭಾರತ ವಿರುದ್ಧದ ಫೈನಲ್​ ಪಂದ್ಯದಿಂದಲೂ ಪೆರ್ರಿ ಹೊರಗುಳಿದಿದ್ದರು. 6 ತಿಂಗಳ ಕಾಲ ವಿಶ್ರಾಂತಿ ಸೂಚಿಸಲಾಗಿತ್ತು. ನೆಟ್ಸ್​ನಲ್ಲಿ ಅಭ್ಯಾಸ ಮಾಡುವುದಕ್ಕೂ ಮುನ್ನ ಹೊರಾಂಗಣ ಹಾಗೂ ಒಳಾಂಗಣದಲ್ಲಿ ದೈಹಿಕ ಕಸರತ್ತು ನಡೆಸಿದ್ದಾರೆ. ಕಠಿಣ ಅಭ್ಯಾಸದ ವಿಡಿಯೋಗಳನ್ನು ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ.

ಮೂಲತಃ ಮೆಲ್ಬೋರ್ನ್​ನವರಾದ ಪೆರ್ರಿ ಆಸ್ಟ್ರೆಲಿಯಾದ ಪ್ರಮುಖ ಆಲ್ರೌಂಡರ್​ ಆಗಿದ್ದಾರೆ. ಮೆಲ್ಬೋರ್ನ್​ನಲ್ಲೇ ಅತಿಹೆಚ್ಚು ಕೋವಿಡ್​-19 ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿಯೇ ಪುರುಷರ ಟಿ20 ವಿಶ್ವಕಪ್​ ಟೂರ್ನಿಯನ್ನು ಮುಂದೂಡಲಾಯಿತು. ಆಸ್ಟ್ರೆಲಿಯಾದ 26 ಸದಸ್ಯರ ಪುರುಷರ ತಂಡ ಮುಂದಿನ ತಿಂಗಳು ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದೆ. ಆದರೆ, ಮಹಿಳಾ ತಂಡಗಳಿಗೆ ಸದ್ಯ ಯಾವುದೇ ಕ್ರಿಕೆಟ್​ ಟೂರ್ನಿಗಳಿಲ್ಲ. ಕಳೆದ ಮಾರ್ಚ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಆಸ್ಟ್ರೆಲಿಯಾ ಹಿಂದೆ ಸರಿದಿತ್ತು. ಆಸ್ಟ್ರೆಲಿಯಾದ ಕೆಲ ಸ್ಟಾರ್​ ಆಟಗಾರರು ಸೆ.19 ರಿಂದ ನ.10ರವರೆಗೆ ಯುಎಇಯಲ್ಲಿ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net