VIDEO:ಸನ್​ರೈಸರ್ಸ್​ ತಂಡದ ನಾಯಕ ಡೇವಿಡ್​ ವಾರ್ನರ್​ ಆರ್​ಸಿಬಿಗೆ ಗುಡ್​ ಲಕ್​ ಹೇಳಿದ್ಯಾಕೆ..?

virat and david for web
Published on

ಬೆಂಗಳೂರು: ಕರೊನಾ ವೈರಸ್​ ಲಾಕ್​ಡೌನ್​ ವೇಳೆ ಆಸ್ಟ್ರೆಲಿಯಾದ ಸ್ಫೋಟಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದ ಆಟಗಾರ. ಇದೀಗ 13ನೇ ಐಪಿಎಲ್​ಗೆ ದಿನಗಣನೆ ಆರಂಭಗೊಂಡಿದೆ. ಎಲ್ಲರ ಚಿತ್ತ ಯುಎಇಯಲ್ಲಿ ನಡೆಯಲಿರುವ ಐಪಿಎಲ್​ನತ್ತ ನೆಟ್ಟಿದೆ. ಇತ್ತೀಚೆಗೆ ಅಭಿಮಾನಿಯೊಬ್ಬ ವಾರ್ನರ್​ ಪೋಸ್ಟ್​ಗೆ ಈ ಸಲ ಕಪ್​ ನಮ್ದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ವಾರ್ನರ್​ ಗುಡ್​ಲಕ್​ ಎಂದು ಹೇಳುವ ಮೂಲಕ ಆರ್​ಸಿಬಿ ತಂಡಕ್ಕೆ ಶುಭಾಶಯ ಕಳುಹಿಸಿದ್ದಾರೆ. ಡೇವಿಡ್​ ವಾರ್ನರ್​ ಐಪಿಎಲ್​ನಲ್ಲಿ ಸನ್​ರೈಸರ್ಸ್​ ತಂಡ ಮುನ್ನಡೆಸಲಿದ್ದಾರೆ.

ಸಾಮಾಜಿಕ ಜಾಲತಾಣಗಳಿಗೂ ವಾರ್ನರ್​ಗೂ ಎಲ್ಲಿಲ್ಲದ ನಂಟು. ದಿನಂಪ್ರತಿ ಒಂದಿಲ್ಲೊಂದು ವಿಡಿಯೋ, ಫೋಟೋಗಳನ್ನು ಶೇರ್​ ಮಾಡುವುದು ವಾರ್ನರ್​ ಹವ್ಯಾಸ.. ವಾರ್ನರ್​ ವಿಡಿಯೋಗೆ ಆರ್​ಸಿಬಿ ಅಭಿಮಾನಿಯೊಬ್ಬರು ಈ ಸಲ ಕಪ್​ ನಮ್ದೆ ಎಂದು ಪ್ರತಿಕ್ರಿಯೆ ನೀಡಿದ್ದರು. ವಾರ್ನರ್​ ಆತನನ್ನು ಟ್ರೋಲ್​ ಮಾಡುತ್ತಾರೆ ಎಂದೇ ಭಾವಿಸಲಾಗಿತ್ತು. ಇದರ ಬದಲಿಗೆ ವಾರ್ನರ್​ ಆರ್​ಸಿಬಿ ಸಂದೇಶಕ್ಕೆ ಗುಡ್​ಲಕ್​ ಎಂದು ಮೆಸೇಜ್​ ಮಾಡಿದ್ದಾರೆ.

2008 ರಿಂದಲೂ ಐಪಿಎಲ್​ ಭಾಗವಾಗಿರುವ ಆರ್​ಸಿಬಿ ಇದುವರೆಗೂ ಟ್ರೋಫಿ ಜಯಿಸಿಲ್ಲ. 2009, 2011 ಹಾಗೂ 2016ರಲ್ಲಿ ಫೈನಲ್​ ಪ್ರವೇಶಿಸಿದರೂ ಪ್ರಶಸ್ತಿ ಜಯಿಸುವಲ್ಲಿ ಮುಗ್ಗರಿಸಿತ್ತು. 2019ರಲ್ಲಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಪಡೆದಿತ್ತು. 2013ರಿಂದ ಕೊಹ್ಲಿ ಆರ್​ಸಿಬಿ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕನಾಗಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ ಇದುವರೆಗೂ ಆಡಿರುವ 110 ಪಂದ್ಯಗಳಲ್ಲಿ 49ರಲಷ್ಟೇ ಜಯ ದಾಖಲಿಸಿದೆ. 7 ಆವೃತ್ತಿಗಳಲ್ಲಿ ಕೇವಲ 2 ಬಾರಿಯಷ್ಟೇ ಪ್ಲೇ ಆಫ್​ ಹಂತಕ್ಕೇರಿದೆ. ಡೇವಿಡ್​ ವಾರ್ನರ್​ 47 ಪಂದ್ಯಗಳಿಗೆ ಸನ್​ರೈಸರ್ಸ್​ ತಂಡಕ್ಕೆ ನಾಯಕತ್ವ ವಹಿಸಿದ್ದು, 26 ರಲ್ಲಿ ಜಯ ಕಂಡಿದ್ದಾರೆ. ಜತೆಗೆ 2016ರಲ್ಲಿ ವಾರ್ನರ್​ ಸಾರಥ್ಯದಲ್ಲೇ ಸನ್​ರೈಸರ್ಸ್​ ತಂಡ ಆರ್​ಸಿಬಿ ಮಣಿಸಿ ಪ್ರಶಸ್ತಿ ಜಯಿಸಿತ್ತು. ಈ ಬಾರಿಯೂ ವಾರ್ನರ್ ಸನ್ ರೈಸರ್ಸ್ ತಂಡ ಮುನ್ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net