

ಅಡಿಲೇಡ್: ಆಸ್ಟ್ರೆಲಿಯಾ ಟೆಸ್ಟ್ ತಂಡದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ದೇಶೀಯ ಏಕದಿನ ಪಂದ್ಯವೊಂದರಲ್ಲಿ 8 ಕ್ಯಾಚ್ ಹಿಡಿಯುವ ಮೂಲಕ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.
ದಕ್ಷಿಣ ಆಸ್ಟ್ರೆಲಿಯಾ ತಂಡದ ಪರ ಪಂದ್ಯದಲ್ಲಿ ಅಲೆಕ್ಸ್ ಕ್ಯಾರಿ, ಕ್ವೀನ್ಸ್ಲ್ಯಾಂಡ್ ವಿರುದ್ಧ ಈ ಸಾಧನೆ ಮಾಡಿದರು. ಜೋರ್ಡನ್ ಬಕಿಂಗ್ಹ್ಯಾಂ ಬೌಲಿಂಗ್ನಲ್ಲೇ 5 ಕ್ಯಾಚ್ ಹಿಡಿದ ಕ್ಯಾರಿ, ಇಂಗ್ಲೆಂಡ್ನ ಸಾಮರ್ಸೆಟ್ ತಂಡದ ಡೆರೆಕ್ ಟೇಲರ್ (1982) ಮತ್ತು ವೋರ್ಸೆಸ್ಟರ್ಶೈರ್ನ ಜೇಮ್ಸ್ ಪೈಪ್ (2021) ವಿಶ್ವದಾಖಲೆ ಸರಿಗಟ್ಟಿದರು.