

ಡರ್ಬನ್: ಆರಂಭಿಕ ಟ್ರಾವಿಸ್ ಹೆಡ್ (91 ರನ್, 48 ಎಸೆತ, 8 ಬೌಂಡರಿ, 6 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೆಲಿಯಾ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 5 ವಿಕೆಟ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಮಿಚೆಲ್ ಮಾರ್ಷ್ ಸಾರಥ್ಯದಲ್ಲಿ ಆಡಿದ ಮೊದಲ ಚುಟುಕು ಕ್ರಿಕೆಟ್ ಸರಣಿಯಲ್ಲೇ ಆಸೀಸ್ 3-0 ಕ್ಲೀನ್ಸ್ವೀಪ್ ಸಂಭ್ರಮ ಕಂಡಿದೆ.
ಕಿಂಗ್ಸ್ಮೀಡ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ 8 ವಿಕೆಟ್ಗೆ 190 ರನ್ ಪೇರಿಸಿತು. ಪ್ರತಿಯಾಗಿ ಆಸೀಸ್ 17.5 ಓವರ್ಗಳಲ್ಲಿ 5 ವಿಕೆಟ್ಗೆ 191 ರನ್ ಪೇರಿಸಿ ಜಯ ಸಾಧಿಸಿತು. ಇನ್ನು ಗುರುವಾರದಿಂದ ಉಭಯ ತಂಡಗಳ ನಡುವೆ 5 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಮುಂಬರುವ ವಿಶ್ವಕಪ್ ಸಿದ್ಧತೆಗೆ ಮಹತ್ವದ ವೇದಿಕೆ ಎನಿಸಿದೆ.
ದಕ್ಷಿಣ ಆಫ್ರಿಕಾ: 8 ವಿಕೆಟ್ಗೆ 190 (ರೀಜಾ ಹೆಂಡ್ರಿಕ್ಸ್ 42, ಮಾರ್ಕ್ರಮ್ 41, ಡೋನಾವನ್ 48, ಅಬೋಟ್ 31ಕ್ಕೆ 4, ಸ್ಟೋಯಿನಿಸ್ 39ಕ್ಕೆ 2), ಆಸ್ಟ್ರೆಲಿಯಾ: 17.5 ಓವರ್ಗಳಲ್ಲಿ 5 ವಿಕೆಟ್ಗೆ 191 (ಟ್ರಾವಿಸ್ ಹೆ 91, ಮಾರ್ಷ್ 15, ಇಂಗ್ಲಿಸ್ 42, ಸ್ಟೋಯಿನಿಸ್ 37*, ಪಾರ್ಚೂನ್ 36ಕ್ಕೆ 2, ಕೋಯೆಟ್ಜೀ 36ಕ್ಕೆ 2). ಪಂದ್ಯಶ್ರೇಷ್ಠ: ಟ್ರಾವಿಸ್ ಹೆಡ್, ಸರಣಿಶ್ರೇಷ್ಠ: ಮಿಚೆಲ್ ಮಾರ್ಷ್.