ಆಸೀಸ್ ಮಾಧ್ಯಮಗಳಲ್ಲಿ ಟೀಮ್ ಇಂಡಿಯಾ ಗೆಲುವಿಗೆ ವಿಶ್ಲೇಷಣೆ ಹೇಗಿದೆ ಗೊತ್ತಾ?

Australia v India: 4th Test: Day 5
BRISBANE, AUSTRALIA - JANUARY 19: The Indian team celebrates victory after day five of the 4th Test Match in the series between Australia and India at The Gabba on January 19, 2021 in Brisbane, Australia. (Photo by Bradley Kanaris/Getty Images)
Published on

ಬ್ರಿಸ್ಬೇನ್: ಭಾರತ ತಂಡದ ಗಾಬಾ ಮೈದಾನದಲ್ಲಿ ಜಯ ದಾಖಲಿಸಿ ಐತಿಹಾಸಿಕ ಸಾಧನೆ ಮಾಡಿದೆ. ಕಳೆದ 32 ವರ್ಷಗಳಿಂದ ಬ್ರಿಸ್ಬೇನ್‌ನಲ್ಲಿ ಸೋಲು ಕಾಣದೆ ಮೆರೆಯುತ್ತಿದ್ದ ಆಸೀಸ್ ತಂಡಕ್ಕೆ ಟೀಮ್ ಇಂಡಿಯಾ ಯುವ ಪಡೆ ತಕ್ಕ ಉತ್ತರ ಕೊಟ್ಟಿದೆ. 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿದೆ. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 36 ರನ್‌ಗಳಿಗೆ ಸರ್ವಪತನ ಕಂಡಿದ್ದ ಭಾರತ, ಬ್ರಿಸ್ಬೇನ್‌ನಲ್ಲಿ 329ರನ್ ಪೇರಿಸಿ ಜಯ ದಾಖಲಿಸಿತು. ಪ್ರಮುಖ ಆಟಗಾರರ ಅಲಭ್ಯತೆ ನಡುವೆಯೂ ಟೀಮ್ ತೋರಿದ ನಿರ್ವಹಣೆ ವಿಶ್ವ ಕ್ರಿಕೆಟ್ ಅನ್ನೆ ಬೆರಗಾಗಿಸಿದೆ. ಮಂಗಳವಾರ ಮಧ್ಯಾಹ್ನದಿಂದಲೂ ಭಾರತದ ಮಾಧ್ಯಮಗಳು ಅಜಿಂಕ್ಯ ರಹಾನೆ ಪಡೆಯನ್ನು ಹೊಗಳುತ್ತಿದ್ದರೆ, ಅತ್ತ ಆಸ್ಟ್ರೇಲಿಯಾ ಮಾಧ್ಯಮಗಳು ಕೂಡ ಇದಕ್ಕೆ ಹೊರತಾಗಿಲ್ಲ.

ಗಾಯದ ಸಮಸ್ಯೆ ಒಂದೆಡೆಯಾದರೆ, ಯುವ ಆಟಗಾರರನ್ನೇ ಒಳಗೊಂಡ ಭಾರತ ಅತ್ಯುತ್ತಮ ನಿರ್ವಹಣೆ ಎಲ್ಲೆಡೆ ಮೆಚ್ಚುಗೆ ಪಾತ್ರವಾಗಿದೆ. ‘ಇದೊಂದು ಪವಾಡವೇ ಸರಿ. ಗಾಬಾದಲ್ಲಿ ಪವಾಡ ಮಾಡಿದೆ. 1988ರಿಂದಲೂ ಆಸೀಸ್ ಹಿಡಿತದಲ್ಲಿದ್ದ ಗೆಲುವನ್ನು ದಕ್ಕಿಸಿಕೊಳ್ಳಲು ಯಶಸ್ವಿಯಾಗಿದೆ’ ಎಂದು ದ ಆಸ್ಟ್ರೇಲಿಯನ್ ಪತ್ರಿಕೆ ಪ್ರಕಟಿಸಿದೆ. ಆಸೀಸ್ ತಂಡ ಗಾಬಾ ಅಜೇಯ ಓಟಕ್ಕೆ ಭಾರತ ತಂಡ ಬ್ರೇಕ್ ಹಾಕಿದೆ ಎಂದು ಕ್ರಿಕೆಟ್ ವೆಬ್‌ಸೈಟ್ ಕ್ರಿಕೆಟ್.ಕಾಮ್.ಎಯು ಬರೆದುಕೊಂಡಿದೆ. ಈ ಕುರಿತು ವಿಶೇಷ ಲೇಖನ ಬರೆಯಲಾಗಿದ್ದು, ಆಸೀಸ್ ತಂಡದ ಗೆಲುವಿನ ನಿಯಮವನ್ನು ಭಾರತ ಗಾಬಾದಲ್ಲಿ ಉಲ್ಲಂಸಿದೆ ಎಂದು ಹೇಳಲಾಗಿದೆ. ಭಾರತ ತಂಡದ ಹಿರಿಯ ಆಟಗಾರ ಆರ್.ಅಶ್ವಿನ್‌ಗೆ ಸ್ಲೆಡ್ಜಿಂಗ್ ಮಾಡುವ ಮೂಲಕ ಎಡವಿದರು. ಇದೇ ಆಸೀಸ್ ಮಾಡಿದ ಮೊದಲ ತಪ್ಪು ಎಂದು ಪ್ರತಿಷ್ಠಿತ ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ಬರೆದಿದೆ. ವ್ಹಾ ವ್ಹಾ...ಮೂರು ದಶಕಗಳಿಂದ ಅಜೇಯವಾಗಿದ್ದ ಆಸ್ಟ್ರೇಲಿಯಾ ತಂಡ ಗಾಬಾದಲ್ಲಿ ಸೋತಿದೆ ಎಂದು ಸೆವೆನ್ ಕ್ರಿಕೆಟ್ ವೆಬ್‌ಸೈಟ್ ಹೇಳಿದೆ. "ಡೈಲಿ ಟೆಲಿಗ್ರಾಫ್" ಸೇರಿದಂತೆ ಆಸೀಸ್‌ನ ಪ್ರಮುಖ ಮಾಧ್ಯಮಗಳು ಟೀಮ್ ಇಂಡಿಯಾ ನಿರ್ವಹಣೆಯಲ್ಲಿ ಶ್ಲಾಸಿವೆ.

ಆಸ್ಟ್ರೇಲಿಯಾ ನೀಡಿದ 328 ರನ್ ಬೆನ್ನಟ್ಟಿದ ಭಾರತ 7 ವಿಕೆಟ್ ಕಳೆದುಕೊಂಡು ಈ ಸಾಧನೆ ಮಾಡಿತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 369 ರನ್‌ಗಳಿಸಿದ್ದರೆ, ಭಾರತ 336 ರನ್‌ಗಳಿಗೆ ಆಲೌಟ್ ಆಗಿ 33 ರನ್ ಹಿನ್ನಡೆ ಕಂಡಿತ್ತು. ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ 294 ರನ್‌ಗಳಿಸಿ ಭಾರತಕ್ಕೆ 328 ರನ್ ಗೆಲುವಿನ ಗುರಿನೀಡಿತ್ತು. ಇದರೊಂದಿಗೆ ಭಾರತ 4 ಪಂದ್ಯಗಳ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net