

ಪಲ್ಲೆಕಲೆ: ಶ್ರೀಲಂಕಾ ವಿರುದ್ಧ ಜುಲೈ 27ರಂದು ಆರಂಭಗೊಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪ್ರವಾಸಿ ಭಾರತ ತಂಡವು ಕ್ಲೀನ್ ಸ್ವೀಪ್ ಸಾಧಿಸಿದ್ದು, ನೂತನ ಕೋಚ್ ಗೌತಮ್ ಗಂಭೀರ್ಗೆ ಗೆಲುವಿನ ಉಡುಗೊರೆ ನೀಡುವ ಮೂಲಕ ಆಟಗಾರರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ನೂತನ ನಾಯಕ ಸೂರ್ಯಕುಮಾರ್ ಯಾದವ್ ಸಾರಥ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಮೂಲಕ ಆತಿಥೇಯರ ಮೇಲೆ ಕಡಿವಾಣ ಹೇರಿದ ಪ್ರವಾಸಿ ಭಾರತ ತಂಡದ ಆಟಗಾರರು ಎದುರಾಳಿಗಳ ವಿರುದ್ಧ ಕ್ಲೀನ್ಸ್ವೀಪ್ ಸಾಧಿಸಿದ್ದಾರೆ. ಇತ್ತ ತಂಡದ ಪ್ರದರ್ಶನವನ್ನು ಹಾಡಿಹೊಗಳಿರುವ ನೂತನ ಕೋಚ್ ಗೌತಮ್ ಗಂಭೀರ್ ಈ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರಣಿ ಗೆಲುವಿಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಬ್ಯಾಟಿಂಗ್ ಹಾಗೂ ಅತ್ಯುತಮ ನಾಯಕತ್ವಕ್ಕೆ ನಾನು ಸೂರ್ಯ ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ. ನಾನು ಪಂದ್ಯ ಶುರುವಾಗುವುದಕ್ಕು ಮುನ್ನ ಆಟಗಾರರ ಬಳಿ ಒಂದನ್ನು ಕೇಳಿದ್ದೆ. ಆದರೆ, ಅವರು ಸಂಪೂರ್ಣವಾಗಿ ನಾನು ಕೇಳಿದ್ದನ್ನು ನೀಡಿದ್ದಾರೆ. ನಾವು ಆಟವಾಡುವಾಗ ಪ್ರತಿಬಾರಿಯು ಈ ರೀತಿಯಾಗುತ್ತದೆ. ಆದರೆ, ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದೆಂಬುದನ್ನು ನೀವು ತೋರಿಸಿದ್ದೀರಿ.
ನಾವು ಒಂದು ರನ್ ಗಳಿಸಲು ಪರದಾಡುತ್ತಿರುವಾಗ ಸನ್ನಿವೇಶ ಹಾಗೂ ಪರಿಸ್ಥಿತಿಗಳನ್ನು ತ್ವರಿತವಾಗಿ ನಿರ್ಣಯಿಸಬೇಕಾಗಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಗೆ ನಿಮ್ಮ ಕೌಶಲ್ಯ ಮತ್ತು ಫಿಟ್ನೆಸ್ಅನ್ನು ಚೆನ್ನಾಗಿ ಇಟ್ಟುಕೊಳ್ಳಿ. ಸರಣಿಗೆ ಯಾರು ಆಯ್ಕೆಯಾಗುತ್ತಾರೆ ಎಂಬುದು ನನಗೆ ಗೊತ್ತಿಲ್ಲಾ. ಆದರೆ ಎಲ್ಲರೂ ಫಿಟ್ ಆಗಿರುವುದು ಸೂಕ್ತ ಎಂದು ಶ್ರೀಲಂಕಾ ವಿರುದ್ಧದ ಸರಣಿ ಗೆಲುವಿನ ಬಳಿಕ ನೂತನ್ ಕೋಚ್ ಗೌತಮ್ ಗಂಭೀರ್ ಆಟಗಾರರನ್ನು ಉದ್ಧೇಶಿಸಿ ಹೇಳಿದ್ದಾರೆ.