ಏಷ್ಯನ್​ ಗೇಮ್ಸ್​ ಹಾಕಿಯಲ್ಲೂ ನಮ್ಮದೇ ಮೇಲುಗೈ! ಪಾಕ್​ ತಂಡವನ್ನು​ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ | Asian Games

ಜಪಾನ್‌ನ ಕಕಾಮಿಗಹಾರದಲ್ಲಿ ಗುರುವಾರ ನಡೆದ ಈ ಹೈವೋಲ್ಟೇಜ್ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತದ ಪರ ನಾಯಕ ಹರ್ಮನ್‌ಪ್ರೀತ್ 5 ಮತ್ತು 13ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು.
ಏಷ್ಯನ್​ ಗೇಮ್ಸ್​ ಹಾಕಿಯಲ್ಲೂ ನಮ್ಮದೇ ಮೇಲುಗೈ! ಪಾಕ್​ ತಂಡವನ್ನು​  ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ | Asian Games
ಏಷ್ಯನ್​ ಗೇಮ್ಸ್​ ಹಾಕಿಯಲ್ಲೂ ನಮ್ಮದೇ ಮೇಲುಗೈ! ಪಾಕ್​ ತಂಡವನ್ನು​ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ | Asian GamesAsian Games
Published on: 

ಜಪಾನ್: ಆತಿಥೇಯರ ನಾಡಿನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ ಕ್ರೀಡಾಕೂಟದಲ್ಲಿ ಪುರುಷರ ಭಾರತ ತಂಡವು ಹಾಕಿ ವಿಭಾಗದಲ್ಲಿ ಇದೀಗ ನೇರವಾಗಿ ಫೈನಲ್​ಗೆ ಎಂಟ್ರಿಕೊಟ್ಟಿದೆ.

ಕ್ಯಾಪ್ಟನ್​ ಹರ್ಮನ್‌ಪ್ರೀತ್ ಸಿಂಗ್ ಅವರ ಅಮೋಘ ಎರಡು ಗೋಲುಗಳ ಬಲದಿಂದ ಅಬ್ಬರಿಸಿದ ಭಾರತ ಹಾಕಿ ತಂಡ, ತನ್ನ ಸಾಂಪ್ರದಾಯಿಕ ವೈರಿ ರಾಷ್ಟ್ರ ಪಾಕಿಸ್ತಾನದ ಎದುರು 4-3 ಗೋಲುಗಳ ರೋಚಕ ಗೆಲುವು ಸಾಧಿಸಿ ಏಷ್ಯನ್ ಗೇಮ್ಸ್‌ನ ಫೈನಲ್​ ಸುತ್ತಿಗೆ ಲಗ್ಗೆಯಿಟ್ಟಿದೆ. ಜಪಾನ್‌ನ ಕಕಾಮಿಗಹಾರದಲ್ಲಿ ಗುರುವಾರ ನಡೆದ ಈ ಹೈವೋಲ್ಟೇಜ್ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತದ ಪರ ನಾಯಕ ಹರ್ಮನ್‌ಪ್ರೀತ್ 5 ಮತ್ತು 13ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು.

ನಂತರದಲ್ಲಿ, ಸುಖ್‌ಜೀತ್ ಸಿಂಗ್ (23ನೇ ನಿಮಿಷ) ಮತ್ತು ಪಂದ್ಯದ ಕೊನೆಯ ನಿಮಿಷದಲ್ಲಿ ಅಭಿಷೇಕ್ ಗಳಿಸಿದ ಗೋಲ್ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿತು. ಪಾಕಿಸ್ತಾನದ ಪರ ಅಬು ಮಹಮೂದ್ (30ನೇ ನಿಮಿಷ), ಹನ್ನಾನ್ ಶಾಹಿದ್ (45ನೇ ನಿಮಿಷ) ಮತ್ತು ವಹೀದ್ ರಾಣಾ (49ನೇ ನಿಮಿಷ) ಗೋಲು ಬಾರಿಸಿ ತಿರುಗೇಟು ನೀಡಿದ್ದೇ ಆದರೂ ಭಾರತ ಎದುರು ಗೆದ್ದು ತೋರಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಪ್ಪೆ ಮುಖ ಹಾಕಿಕೊಂಡೇ ಪಾಕಿಸ್ತಾನ ತಂಡ ಮತ್ತ ಅಭಿಮಾನಿಗಳು ಮನೆ ದಾರಿ ಹಿಡಿದರು.

ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ತಂಡವು ನೇರವಾಗಿ ಲಾಸ್ ಏಂಜಲೀಸ್ (LA) ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದು, ಭಾರತ ಈ ಅವಕಾಶವನ್ನು ಕೈಚೆಲ್ಲುವ ಸಾಧ್ಯತೆಗಳೇ ಇಲ್ಲ ಎನ್ನುವಂತೆ ಅಮೋಘ ಪ್ರದರ್ಶನ ತೋರಿದೆ. ಈ ವರ್ಷದ ವಿಶ್ವಕಪ್‌ನಲ್ಲಿ 7ನೇ ಸ್ಥಾನಕ್ಕೆ ಕುಸಿದು ನಿರಾಶೆ ಮೂಡಿಸಿದ್ದ ಭಾರತ ತಂಡ, ಪ್ರಸ್ತುತ ಏಷ್ಯನ್ ಗೇಮ್ಸ್‌ನಲ್ಲಿ ಪೂಲ್ 'ಎ' ವಿಭಾಗದಲ್ಲಿ ಆಡಿದ ಐದಕ್ಕೆ ಐದೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

Also Read
0,0,0,0,0,0... ಭಾರತ-ಲಂಕಾ ಸೆಮೀಸ್​ನಲ್ಲಿ ನೀವಿದನ್ನು ಗಮನಿಸಿದ್ರಾ? ಶ್ರೀಲಂಕಾಗೆ ನಿಜಕ್ಕೂ ಭಾರಿ ಮುಖಭಂಗ | Asian Games
ಏಷ್ಯನ್​ ಗೇಮ್ಸ್​ ಹಾಕಿಯಲ್ಲೂ ನಮ್ಮದೇ ಮೇಲುಗೈ! ಪಾಕ್​ ತಂಡವನ್ನು​  ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ | Asian Games

ಇಂಡೋನೇಷ್ಯಾ (13-1), ಶ್ರೀಲಂಕಾ (16-1), ದಕ್ಷಿಣ ಕೊರಿಯಾ (8-9), ಜಪಾನ್ (2-0) ಮತ್ತು ಬಾಂಗ್ಲಾದೇಶ (10-0) ವಿರುದ್ಧ ಭರ್ಜರಿ ಜಯ ದಾಖಲಿಸಿದ್ದ ಭಾರತ, ಈಗ ಪಾಕಿಸ್ತಾನವನ್ನೂ ಮಣಿಸಿ ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಹಾದಿಯಲ್ಲಿ ಇನ್ನೂ ಒಂದೇ ಒಂದು ಹೆಜ್ಜೆ ಬಾಕಿಯಿದೆ ಅಷ್ಟೇ. ಮತ್ತೊಂದೆಡೆ, ಭಾರತದ ಮಹಿಳಾ ಹಾಕಿ ತಂಡವೂ ದಕ್ಷಿಣ ಕೊರಿಯಾ ವಿರುದ್ಧ 2-0 ಅಂತರದ ಗೆಲುವು ಸಾಧಿಸಿ ಫೈನಲ್ ತಲುಪಿದ್ದು, ಶೀಘ್ರದಲ್ಲೇ ನಡೆಯಲಿರುವ ಫೈನಲ್‌ನಲ್ಲಿ ಪುರುಷರ ತಂಡವು ಮಲೇಶಿಯಾ ಮತ್ತು ದಕ್ಷಿಣ ಕೊರಿಯಾ ನಡುವಿನ ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net