ಇಂದು ಸಂಜೆ ವರ್ಣರಂಜಿತ ಏಷ್ಯಾಡ್​ ಆರಂಭೋತ್ಸವ; ಭಾರತಕ್ಕೆ ಹರ್ಮಾನ್​, ಲವ್ಲಿನಾ ಸಾರಥ್ಯ

asian open web
Published on

ಹಾಂಗ್​ಝೌ : ಕರೊನಾ ಹಾವಳಿಯ ಬಳಿಕ ಅತಿದೊಡ್ಡ ಕ್ರೀಡಾಕೂಟದ ಆಯೋಜನೆಗೆ ಚೀನಾ ಸಿದ್ಧವಾಗಿದ್ದು, ಹಾಂಗ್​ಝೌ ಒಲಿಂಪಿಕ್​ ಸ್ಪೋರ್ಟ್ಸ್​ ಎಕ್ಸ್​ಪೋ ಸೆಂಟರ್​ನಲ್ಲಿ ಶನಿವಾರ ನಡೆಯಲಿರುವ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಪರಿಸರ ಜಾಗೃತಿಯ ಸಂದೇಶವನ್ನೂ ಸಾರಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಕ್ರೀಡಾಕೂಟಕ್ಕೆ ಚಾಲನೆ ನೀಡುವ ನಿರೀಕ್ಷೆ ಇದೆ.

ಕೂಟದ ಎಲ್ಲ ತಾಣಗಳಲ್ಲಿ ಹಸಿರು ವಿದ್ಯುತ್​ ಬಳಸಲಾಗುತ್ತಿದ್ದು, ಇಂಗಾಲ ಮುಕ್ತ ಮತ್ತು ಹಸಿರು ಏಷ್ಯಾಡ್​ ಚೀನಾದ ಧ್ಯೇಯವಾಗಿದೆ. ಹೀಗಾಗಿ ಉದ್ಘಾಟನಾ ಸಮಾರಂಭದಲ್ಲಿ ಸುಡುಮದ್ದು ಪ್ರದರ್ಶನ ಇರುವುದಿಲ್ಲ.

ಆರಂಭ: ಸಂಜೆ 5.30

ಭಾರತದ ಧ್ವಜಧಾರಿಗಳು: ಹರ್ಮಾನ್​ಪ್ರೀತ್​ ಸಿಂಗ್​, ಲವ್ಲಿನಾ ಬೋಗೋರ್ಹೈನ್​.

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​.

ಚೀನಾದಲ್ಲಿ ಇದು 3ನೇ ಏಷ್ಯನ್​ ಗೇಮ್ಸ್​ ಆಗಿದೆ. ಈ ಮುನ್ನ 1990ರಲ್ಲಿ ಬೀಜಿಂಗ್​ ಮತ್ತು 2010ರಲ್ಲಿ ಗುವಾಂಗ್​ರೆೌನಲ್ಲಿ ನಡೆದಿತ್ತು. ಈ ಬಾರಿ ಕ್ರೀಡಾಕೂಟದ 56 ತಾಣಗಳಿಗೆ ಚೀನಾ ಬರೋಬ್ಬರಿ 11,608 ಕೋಟಿ ರೂ. ವ್ಯಯಿಸಿದೆ. ಈ ಪೈಕಿ 12 ಹೊಸ ಮತ್ತು 44 ನವೀಕರಿಸಿದ ಅಥವಾ ತಾತ್ಕಾಲಿಕ ಕ್ರೀಡಾಂಗಣಗಳಾಗಿವೆ.

ಕಳೆದ ವರ್ಷ ನಡೆಯಬೇಕಿತ್ತು

ಮೂಲ ವೇಳಾಪಟ್ಟಿಯ ಪ್ರಕಾರ ಏಷ್ಯನ್​ ಗೇಮ್ಸ್​ ಕಳೆದ ವರ್ಷವೇ ಹಾಂಗ್​ರೆೌನಲ್ಲಿ ನಡೆಯಬೇಕಿತ್ತು. ಆದರೆ ಆಗ ಚೀನಾದಲ್ಲಿ ಕರೊನಾ ಅವಳಿ ಹೆಚ್ಚಾಗಿದ್ದರಿಂದಾಗಿ ಕ್ರೀಡಾಕೂಟ ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net