ಏಷ್ಯಾಡ್​ಗೆ ರಾಜ್ಯದಿಂದ 20ಕ್ಕೂ ಅಧಿಕ ಕ್ರೀಡಾಪಟುಗಳು ಆಯ್ಕೆ

karnataka asiad web
Published on

ನವದೆಹಲಿ: ಮುಂಬರುವ ಏಷ್ಯಾಡ್​ಗೆ ಭಾರತ ತಂಡದಲ್ಲಿ ಕರ್ನಾಟಕದ ಸುಮಾರು 23 ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ. ಟೆನಿಸ್​ನಲ್ಲಿ ರೋಹನ್​ ಬೋಪಣ್ಣ, ಬ್ಯಾಡ್ಮಿಂಟನ್​ನಲ್ಲಿ ಅಶ್ವಿನಿ ಪೊನ್ನಪ್ಪ, ಕ್ರಿಕೆಟ್​ನಲ್ಲಿ ರಾಜೇಶ್ವರಿ ಗಾಯಕ್ವಾಡ್​, ವಾಲಿಬಾಲ್​ನಲ್ಲಿ ಅಶ್ವಲ್​ ರೈ, ಶೂಟಿಂಗ್​ನಲ್ಲಿ ದಿವ್ಯಾ ಟಿ.ಎಸ್​. (10 ಮೀ. ಏರ್​ ಪಿಸ್ತೂಲ್​) ಸ್ಪರ್ಧಿಸಲಿದ್ದಾರೆ.

ಅಥ್ಲೆಟಿಕ್ಸ್​ನಲ್ಲಿ ರಾಜ್ಯದ ನಾಲ್ವರು ಅಥ್ಲೀಟ್​ಗಳಾದ ಬೆಳ್ಳಿಯಪ್ಪ ಎ.ಬಿ (ಮ್ಯಾರಥಾನ್​), ಮಿಜೋ ಚಾಕೋ ಕುರಿಯನ್​ (4/400 ಮೀ. ರಿಲೇ), ಜೆಸ್ಸಿ ಸಂದೇಶ್​ (ಹೈಜಂಪ್​) ಮತ್ತು ಸಿಂಚಲ್​ ಕಾವೇರಮ್ಮ (400 ಮೀ. ಹರ್ಡಲ್ಸ್​) ಸ್ಪರ್ಧಿಸಲಿದ್ದಾರೆ. ಗಾಲ್ಫ್​ ತಂಡದಲ್ಲಿ ರಾಜ್ಯದ ಐವರು (ಅರ್ನಿಬನ್​ ಲಹಿರಿ, ಖಾಲಿನ್​ ಜೋಶಿ, ಅದಿತಿ ಅಶೋಕ್​, ಪ್ರಣವಿ ಅರಸ್​, ಅವನಿ ಪ್ರಶಾಂತ್​) ಸ್ಪರ್ಧಿಸಲಿದ್ದಾರೆ.

ಈಜು ತಂಡದಲ್ಲಿ ರಾಜ್ಯದ 9 ಈಜುಪಟುಗಳು (ಲಿಖಿತ್​ ಎಸ್​ಪಿ, ಅನೀಶ್​ ಗೌಡ, ಶ್ರೀಹರಿ ನಟರಾಜ್​, ತನಿಶ್​ ಜಾರ್ಜ್​ ಮ್ಯಾಥ್ಯೂ, ಉತ್ಕರ್ಷ್​ ಪಾಟೀಲ್​, ನೀನಾ ವೆಂಕಟೇಶ್​, ಧಿನಿಧಿ ದೇಸಿಂು, ಹಷಿಕಾ ರಾಮಚಂದ್ರ, ಲಿನೇಷಾ ಎ.ಕೆ.) ಇದ್ದಾರೆ. ಬೆಂಗಳೂರಿನ 16 ವರ್ಷದ ಗಾಲ್ಫ್​ ಆಟಗಾರ್ತಿ ಅವನಿ ಪ್ರಶಾಂತ್​ ತಂಡದಲ್ಲಿರುವ ಅತ್ಯಂತ ಕಿರಿಯರಾಗಿದ್ದಾರೆ. ಏಷ್ಯಾಡ್​ ಚೀನಾದ ಹಾಂಗ್​ರೆೌನಲ್ಲಿ ಸೆಪ್ಟೆಂಬರ್​ 23ರಿಂದ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net