ಏಷ್ಯಾ ಕಪ್​ನಲ್ಲಿ ಭಾರತದೊಂದಿಗೆ ಪಂದ್ಯ... ಈ ಯುವ ಆಟಗಾರನಿಗೆ ಎದುರುತ್ತಿದೆ ಪಾಕಿಸ್ತಾನ! Asia Cup 2025

Asia Cup 2025
Published on

Asia Cup 2025 : ಏಷ್ಯಾ ಕಪ್-2025 ರಲ್ಲಿ ರೋಮಾಂಚಕ ಹಣಾಹಣಿಗೆ ಸಮಯ ಬಂದಿದೆ. ಈ ಟೂರ್ನಿಯ ಭಾಗವಾಗಿ ಇಂದು (ಸೆ.14) ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ವೀಕ್ಷಿಸಲು ವಿಶ್ವದಾದ್ಯಂತ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಸೋದರಸಂಬಂಧಿಗಳ ನಡುವೆ ನಡೆಯುವ ಈ ಮಹಾ ಪೈಪೋಟಿ ಹೆಚ್ಚು ಆಸಕ್ತಿದಾಯಕವಾಗಿದೆ. ಈ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಎರಡೂ ತಂಡಗಳು ತಮ್ಮ ಕಾರ್ಯತಂತ್ರಗಳನ್ನು ಸಿದ್ಧಪಡಿಸುತ್ತಿವೆ. ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಗೆದ್ದ ನಂತರ ಉತ್ತಮ ಲಯದಲ್ಲಿವೆ. ಹೀಗಾಗಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕದನ ಕುತೂಹಲ ಮೂಡಿಸಿದೆ.

ಇದರ ನಡುವೆ ಪಾಕಿಸ್ತಾನವು ಭಾರತದ ಯುವ ಸೆನ್ಸೇಷನ್ ಅಭಿಷೇಕ್ ಶರ್ಮಾಗೆ ಹೆದರುತ್ತಿದೆ ಎಂದು ಹೇಳಲಾಗುತ್ತದೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನ ತಂಡದ ಆಡಳಿತ ಮಂಡಳಿ ಅಭಿಷೇಕ್​ ವಿರುದ್ಧ ವಿಶೇಷ ತಂತ್ರಗಳನ್ನು ರೂಪಿಸುತ್ತಿದೆ. ಪವರ್ ಪ್ಲೇ ಮೊದಲು ಅಭಿಷೇಕ್ ಅವರನ್ನು ಔಟ್ ಮಾಡಲು ಪಾಕ್​ ಪಡೆ ಪ್ಲಾನ್​ ಮಾಡುತ್ತಿರುವುದಾಗಿ ಕಂಡುಬಂದಿದೆ. ಒಂದು ವೇಳೆ ಅಭಿಷೇಕ್​ ಶರ್ಮ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಂತರೆ ರನ್​ಗಳ ಸುರಿಮಳೆಯಾಗುವುದು ಖಚಿತ ಎಂಬ ಭಾವನೆ ಪಾಕ್​ ಕ್ರಿಕೆಟಿಗರಲ್ಲಿದೆ. ಅದು ನಿಜವೂ ಕೂಡ. ಏಕೆಂದರೆ, ಐಪಿಎಲ್​ನಲ್ಲಿ ಅಭಿಷೇಕ್​ ಆಟವನ್ನು ಎಲ್ಲರೂ ನೋಡಿದ್ದಾರೆ.

ಪಾಕಿಸ್ತಾನದ ಮುಖ್ಯ ತರಬೇತುದಾರ ತಮ್ಮ ಬೌಲರ್‌ಗಳಿಗೆ ಅವರ ಬ್ಯಾಟಿಂಗ್ ಮತ್ತು ಅಭ್ಯಾಸದ ಹಳೆಯ ವಿಡಿಯೋಗಳನ್ನು ತೋರಿಸುತ್ತಿದ್ದಾರೆ ಎಂದು ಕ್ರಿಕೆಟ್ ವಲಯಗಳು ಬಹಿರಂಗಪಡಿಸಿವೆ. ಅಭಿಷೇಕ್ ಔಟ್‌ಸೈಡ್-ಆಫ್-ಸ್ಟಂಪ್ ಎಸೆತಗಳಲ್ಲಿ ದೌರ್ಬಲ್ಯವನ್ನು ಹೊಂದಿದ್ದಾರೆ. ಪಾಕಿಸ್ತಾನವು ಅವರ ದೌರ್ಬಲ್ಯವನ್ನು ಲಾಭ ಮಾಡಿಕೊಳ್ಳಲು ಆಶಿಸುತ್ತಿದೆ. ಆದರೆ ಅಭಿಷೇಕ್ ಆರು ಓವರ್‌ಗಳಿಗಿಂತ ಹೆಚ್ಚು ಕಾಲ ಕ್ರೀಸ್‌ನಲ್ಲಿದ್ದರೆ, ಅವರು ಪಾಕಿಸ್ತಾನಿ ಬೌಲರ್‌ಗಳನ್ನು ಬೆಂಡೆತ್ತುವುದಂತೂ ಖಚಿತ.

ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ, ಅಭಿಷೇಕ್​ ಅದ್ಭುತ ಇನ್ನಿಂಗ್ಸ್ ಆಡಿದರು. ಕೇವಲ 16 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 30 ರನ್ ಗಳಿಸಿದರು. ಅಂದಹಾಗೆ, ಅಭಿಷೇಕ್, ತಮ್ಮ ವಿನಾಶಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅಂತಾರಾಷ್ಟ್ರೀಯ ಟಿ20ಗಳಲ್ಲಿ ಅವರ ಸ್ಟ್ರೈಕ್ ರೇಟ್ 193.50 ಇದೆ. ಇದಲ್ಲದೆ, ಈ ಎಡಗೈ ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ಪರ ಅನೇಕ ಬಿರುಗಾಳಿಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net