100ನೇ ಟೆಸ್ಟ್​ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದ ಅಶ್ವಿನ್​

ashwin 100 web
Published on

ಧರ್ಮಶಾಲಾ: ಅನುಭವಿ ಆಫ್​ಸ್ಪಿನ್ನರ್​ ಆರ್​. ಅಶ್ವಿನ್​ 100ನೇ ಟೆಸ್ಟ್​ನಲ್ಲಿ 5 ವಿಕೆಟ್​ ಗೊಂಚಲು ಪಡೆಯುವ ಮೂಲಕ ಹಲವು ವಿಶೇಷ ದಾಖಲೆ ನಿರ್ಮಿಸಿದರು. 147 ವರ್ಷಗಳ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಅಶ್ವಿನ್​ ಮೊದಲ ಮತ್ತು 100 ಟೆಸ್ಟ್​ನಲ್ಲಿ 5 ವಿಕೆಟ್​ ಗೊಂಚಲು ಪಡೆದ ಮೊದಲ ಬೌಲರ್​ ಎನಿಸಿದ್ದಾರೆ. ಅಲ್ಲದೆ ಅವರು 25 ಮತ್ತು 75ನೇ ಟೆಸ್ಟ್​ನಲ್ಲೂ 5 ವಿಕೆಟ್​ ಗೊಂಚಲು ಪಡೆದಿರುವುದು ವಿಶೇಷವಾಗಿದೆ.

ಇನ್ನು ಅಶ್ವಿನ್​ 100ನೇ ಟೆಸ್ಟ್​ನಲ್ಲಿ 5 ವಿಕೆಟ್​ ಗೊಂಚಲು ಪಡೆದ 4ನೇ ಬೌಲರ್​ ಮತ್ತು 2ನೇ ಭಾರತೀಯರಾಗಿದ್ದಾರೆ. ಶೇನ್​ ವಾರ್ನ್​, ಮುರಳೀಧರನ್​, ಅನಿಲ್​ ಕುಂಬ್ಳೆ ಮೊದಲ ಮೂವರು. ಅಶ್ವಿನ್​ 100ನೇ ಟೆಸ್ಟ್​ ಪಂದ್ಯದಲ್ಲಿ ಸರ್ವಾಧಿಕ 9 ವಿಕೆಟ್​ ಪಡೆದ 2ನೇ ಬೌಲರ್​ ಆಗಿದ್ದಾರೆ. ಮುರಳೀಧರನ್​ ಈ ಸಾಧನೆ ಮಾಡಿರುವ ಮೊದಲಿಗ.

ಅಶ್ವಿನ್​ 100ನೇ ಟೆಸ್ಟ್​ನ ಎರಡೂ ಇನಿಂಗ್ಸ್​ಗಳಲ್ಲಿ 4 ವಿಕೆಟ್​ ಕಬಳಿಸಿರುವ ಮೊದಲ ಬೌಲರ್​ ಆಗಿದ್ದಾರೆ. 36ನೇ ಬಾರಿ 5 ವಿಕೆಟ್​ ಗೊಂಚಲು ಪಡೆಯುವ ಮೂಲಕ ಅಶ್ವಿನ್​, ಭಾರತ ಪರ ಸರ್ವಾಧಿಕ 5 ವಿಕೆಟ್​ ಗೊಂಚಲು ಪಡೆದ ಅನಿಲ್​ ಕುಂಬ್ಳೆ (35) ದಾಖಲೆಯನ್ನೂ ಮುರಿದರು.

ಅಶ್ವಿನ್​ 13ನೇ ಬಾರಿ ಬೆನ್​ ಸ್ಟೋಕ್ಸ್​ ವಿಕೆಟ್​ ಪಡೆದರು. ಇದು ಟೆಸ್ಟ್​ನಲ್ಲಿ ಭಾರತದ ಬೌಲರ್​ ಒಬ್ಬ ಯಾವುದೇ ಬ್ಯಾಟರ್​ಅನ್ನು ಗರಿಷ್ಠ ಬಾರಿ ಔಟ್​ ಮಾಡಿದ ದಾಖಲೆಯಾಗಿದೆ. ಕಪಿಲ್​ ದೇವ್​ ಪಾಕಿಸ್ತಾನದ ಮುದಸ್ಸರ್​ ನಜರ್​ರನ್ನು 12 ಬಾರಿ ಔಟ್​ ಮಾಡಿದ್ದು ಹಿಂದಿನ ದಾಖಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net