ಅಶ್ವಿನ್​-ಜಡೇಜಾ ದೂರ; ಬೇರ್ಪಟ್ಟಿದೆ ಭಾರತ ಕಂಡ ಯಶಸ್ವಿ ಸ್ಪಿನ್​ ಬೌಲಿಂಗ್​ ಕಾಂಬಿನೇಷನ್​...

web ash jadeja
Published on

ಬ್ರಿಸ್ಬೇನ್: ಭಾರತ ತಂಡ 2013ರಿಂದ ಹಾಲಿ ವರ್ಷದವರೆಗೆ ತವರಿನಲ್ಲಿ ಸತತ 18 ಟೆಸ್ಟ್​ ಸರಣಿ ಗೆದ್ದು ಪ್ರಾಬಲ್ಯ ಸಾಧಿಸುವಲ್ಲಿ

ಆರ್​. ಅಶ್ವಿನ್​-ರವೀಂದ್ರ ಜಡೇಜಾ ಸ್ಪಿನ್​ ಜೋಡಿಯ ಕೊಡುಗೆ ಮಹತ್ವದ್ದಾಗಿತ್ತು. ಇವರಿಬ್ಬರು ಜತೆಯಾಗಿ ಆಡಿದ 58 ಟೆಸ್ಟ್​ಗಳಲ್ಲಿ ಒಟ್ಟಾರೆ 587 ವಿಕೆಟ್​ ಕಬಳಿಸಿದ್ದರು. ಈ ಮೂಲಕ ಅನಿಲ್​ ಕುಂಬ್ಳೆ-ಹರ್ಭಜನ್​ ಸಿಂಗ್​ ಜೋಡಿಯನ್ನು (501) ಮೀರಿಸಿದ್ದರು..

ಕುಂಬ್ಳೆ ದಾಖಲೆ ಸುರಕ್ಷಿತ

ಅಶ್ವಿನ್​ ನಿವೃತ್ತಿಯೊಂದಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತ ಪರ ಗರಿಷ್ಠ ವಿಕೆಟ್​ ಕಬಳಿಸಿದ ಅನಿಲ್​ ಕುಂಬ್ಳೆ (619) ದಾಖಲೆ ಸುರತವಾಗಿ ಉಳಿದಿದೆ. ಕುಂಬ್ಳೆಗಿಂತ ಅಶ್ವಿನ್​ ಸದ್ಯ 82 ವಿಕೆಟ್​ ಹಿಂದಿದ್ದರು. ಹಾಲಿ ಕ್ರಿಕೆಟಿಗರ ಪೈಕಿಯೂ ಅಶ್ವಿನ್​ ಗರಿಷ್ಠ ವಿಕೆಟ್​ ಸಾಧಕ ಎನಿಸಿದ್ದರು. ಇದೀಗ ಈ ಶ್ರೇಯ ಆಸೀಸ್​ ಸ್ಪಿನ್ನರ್​ ನಾಥನ್​ ಲ್ಯಾನ್​ (533) ಪಾಲಾಗಿದೆ. ಒಟ್ಟಾರೆ ಟೆಸ್ಟ್​ ವಿಕೆಟ್​ ಸಾಧಕರಲ್ಲಿ ಅಶ್ವಿನ್​ 7ನೇ ಸ್ಥಾನದಲ್ಲಿದ್ದಾರೆ.

ಗಾವಸ್ಕರ್​ ಟೀಕೆ

ಸರಣಿಯ ನಡುವೆಯೇ ನಿವೃತ್ತಿ ಘೋಷಿಸಿರುವ ಅಶ್ವಿನ್​ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಕಾರ ಸುನೀಲ್​ ಗಾವಸ್ಕರ್​ ಟೀಕಿಸಿದ್ದಾರೆ. ಸರಣಿಯ ನಂತರದಲ್ಲಿ ನಾನು ಭಾರತ ತಂಡದ ಪರ ಆಯ್ಕೆಗೆ ಲಭ್ಯನಿಲ್ಲ ಎಂದು ಅಶ್ವಿನ್​ ಹೇಳಬಹುದಿತ್ತು. ಆಯ್ಕೆಗಾರರು ಒಂದು ರ್ನಿದಿಷ್ಟ ಉದ್ದೇಶದೊಂದಿಗೆ ಸರಣಿಗೆ ಆಟಗಾರರನ್ನು ಆರಿಸಿರುತ್ತಾರೆ. ಸಿಡ್ನಿ ಟೆಸ್ಟ್​ನಲ್ಲಿ ಸ್ಪಿನ್​ಗೆ ನೆರವಾಗುತ್ತಿದ್ದರೆ ಭಾರತ ಇಬ್ಬರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿಬಹುದಿತ್ತು. ಆಗ ಅಶ್ವಿನ್​ ಅಗತ್ಯವೂ ಬರಬಹುದಿತ್ತು. ಆದರೆ ಸರಣಿಯ ನಡುವೆ ಅಶ್ವಿನ್​ ನಿವೃತ್ತಿ ಹೇಳಿರುವುದು ಸಾಮಾನ್ಯವಲ್ಲ. ಇದೊಂದು ಅಸಮಾನ್ಯ ಬೆಳವಣಿಗೆ ಎಂದು ಗಾವಸ್ಕರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net