

Arjun Tendulkar : ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಮತ್ತು ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡರು. ಸಾನಿಯಾ ಚಂದೋಕ್ ಎಂಬುವರನ್ನು ಅರ್ಜುನ್ ವರಿಸಲಿದ್ದಾರೆ.
ಅಂದಹಾಗೆ, ಸಾನಿಯಾ ಅವರು ಪ್ರಮುಖ ಕೈಗಾರಿಕೋದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಸಮಾರಂಭದಲ್ಲಿ ಭಾಗವಹಿಸಿದ್ದರು. ಮುಂಬೈನಲ್ಲಿ ಆಯೋಜಿಸಲಾದ ಅತ್ಯಂತ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ನಡೆಯಿತು.
ಎಡಗೈ ವೇಗದ ಬೌಲಿಂಗ್ ಆಲ್ರೌಂಡರ್ ಆಗಿರುವ ಅರ್ಜುನ್, 2021ರ ಐಪಿಎಲ್ನಿಂದ ದೇಶೀಯ ಕ್ರಿಕೆಟ್ ಮತ್ತು ಮುಂಬೈ ಇಂಡಿಯನ್ಸ್ನ ಭಾಗವಾಗಿದ್ದಾರೆ. ಸಾನಿಯಾ ಅವರ ಅಜ್ಜ ರವಿ ಘಾಯ್, ಮುಂಬೈ ಮೂಲದ ಪ್ರಮುಖ ಉದ್ಯಮಿ. ಘಾಯ್ ಕುಟುಂಬವು ಇಂಟರ್ಕಾಂಟಿನೆಂಟಲ್ ಹೋಟೆಲ್, ಬ್ರೂಕ್ಲಿನ್ ಕ್ರೀಮರಿ ಇತ್ಯಾದಿಗಳನ್ನು ಹೊಂದಿದೆ. ಘಾಯ್ ಕುಟುಂಬದ ಶಕ್ತಿ ಆತಿಥ್ಯ ಮತ್ತು ಆಹಾರ ಉದ್ಯಮಗಳಲ್ಲಿದೆ. ಆದರೆ, ಸಾನಿಯಾ ಸಾರ್ವಜನಿಕವಾಗಿ ಹೆಚ್ಚು ಪ್ರಸಿದ್ಧಿಯಾಗಿಲ್ಲ.
ಸಾನಿಯಾ, ವಯಸ್ಸಿನಲ್ಲಿ ಅರ್ಜುನ್ಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಅರ್ಜುನ್ಗೆ 25 ವರ್ಷ. ಆದರೆ, ಸಾನಿಯಾಗೆ 26 ವರ್ಷ. ಸಾನಿಯಾ ಜನಿಸಿದ್ದು 1998, ಜೂನ್ 23 ರಂದು, ಅರ್ಜುನ್ ಜನಿಸಿದ್ದು 1999, ಸೆಪ್ಟೆಂಬರ್ 24 ರಂದು. ಅವರ ನಡುವೆ ಸ್ವಲ್ಪ ವಯಸ್ಸಿನ ವ್ಯತ್ಯಾಸವಿದೆ.
ಅಂದಹಾಗೆ, ಸಚಿನ್ ಮತ್ತು ಅವರ ಪತ್ನಿ ಅಂಜಲಿ ನಡುವಿನ ವಯಸ್ಸಿನ ವ್ಯತ್ಯಾಸವು ಕೂಡ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಹೀಗಾಗಿ ಮದುವೆ ವಿಚಾರದಲ್ಲಿ ಅರ್ಜುನ್ ಅವರು ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಸಚಿನ್ ಅವರ ವಿವಾಹ 1995 ರಲ್ಲಿ ನಡೆಯಿತು. ಆಗ ಅವರಿಬ್ಬರ ನಡುವಿನ ವಯಸ್ಸಿನ ಅಂತರ ಆರು ವರ್ಷಗಳು. ಸಚಿನ್ ಅವರು 1973 ಏಪ್ರಿಲ್ 24 ರಂದು ಜನಿಸಿದರೆ, ಅಂಜಲಿ ಅವರು 1967, ನವೆಂಬರ್ 10ರಂದು ಜನಿಸಿದರು. ಆ ಸಮಯದಲ್ಲಿ, ಸಚಿನ್ ಮತ್ತು ಅಂಜಲಿ ನಡುವಿನ ವಯಸ್ಸಿನ ವ್ಯತ್ಯಾಸವು ಎಲ್ಲರನ್ನೂ ಅಚ್ಚರಿಗೊಳಿಸಿತು. ಏಕೆಂದರೆ ಆ ಸಮಯದಲ್ಲಿ ಅದು ಸಾಮಾನ್ಯವಾಗಿರಲಿಲ್ಲ. ಈಗ ಅರ್ಜುನ್ ಮತ್ತು ಸಾನಿಯಾ ನಡುವಿನ ವ್ಯತ್ಯಾಸ ಅಷ್ಟೊಂದು ಮಹತ್ವವಾಗುವುದಿಲ್ಲ. (ಏಜೆನ್ಸೀಸ್)