

From Mother To Wife : ತಾಯಿ ಮತ್ತು ಮಗನ ನಡುವಿನ ಬಾಂಧವ್ಯವನ್ನು ವರ್ಣಿಸಲು ತುಂಬಾ ಕಷ್ಟ. ಮಗುವಿಗೆ ಯಾವುದೇ ಸಣ್ಣ ಸಮಸ್ಯೆ ಎದುರಾದರೂ ತಾಯಿ ಕಣ್ಣೀರಿಡುತ್ತಾಳೆ. ತನ್ನ ಮಗ ಜೀವನದಲ್ಲಿ ಅತ್ಯುನ್ನತ ಸ್ಥಾನವನ್ನು ತಲುಪಬೇಕೆಂದು ಕನಸು ಕಾಣುತ್ತಾಳೆ. ಅದಕ್ಕಾಗಿ ಅವಳು ತನ್ನ ಇಡೀ ಜೀವನವನ್ನು ತ್ಯಾಗ ಮಾಡುತ್ತಾಳೆ. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಎಲ್ಲೆಡೆ, ತಾಯಿ ಮತ್ತು ಮಗನ ನಡುವಿನ ಬಾಂಧವ್ಯ ಇದೇ ರೀತಿ ಇದೆ. ಮಗನಿಗಾಗಿ ಪ್ರಾಣ ಕೊಡಲು ಸಿದ್ಧರಾಗಿರುತ್ತಾರೆ. ಅದೇ ರೀತಿ ತಾಯಿಯನ್ನು ದೇವರಂತೆ ಪೂಜಿಸುವ ಮಕ್ಕಳು ಕೂಡ ಇರುತ್ತಾರೆ. ಆದರೆ, ಈ ಒಂದು ಘಟನೆ ಕಲಿಯುಗದಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ಸಾಬೀತುಪಡಿಸಿದೆ. ಒಬ್ಬ ತಾಯಿ ತನ್ನ ಸ್ವಂತ ಮಗನನ್ನೇ ಮದುವೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ನೀವು ಆ ಮಹಾ ತಾಯಿಯ ಕತೆ ಕೇಳಿದರೆ, ಅಯ್ಯೋ ಇದೆಂಥಾ ದಯನೀಯ ಸ್ಥಿತಿ ಎಂದು ನೀವು ಹೇಳುತ್ತೀರಿ.
ಕೆಲವು ವರ್ಷಗಳ ಹಿಂದೆ ಆರ್ಥಿಕ ತೊಂದರೆಯಿಂದಾಗಿ ಒಬ್ಬ ಮಹಿಳೆ ತನ್ನ ಮಗುವನ್ನು ಬೇರೊಬ್ಬರಿಗೆ ದತ್ತು ನೀಡಿದಳು. ಆ ಬಳಿಕ ತನ್ನ ಮಗುವಿನೊಂದಿಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಂಡಳು. ದಶಕಗಳ ನಂತರ, ಆ ಮಹಿಳೆ 21 ವರ್ಷದ ಯುವಕನನ್ನು ಭೇಟಿಯಾದಳು. ಮೊದಲ ಭೇಟಿಯಲ್ಲೇ ಪರಿಚಯವಾಗಿ, ಅನೇಕ ದಿನಗಳ ಬಳಿಕ ಪ್ರೇಮಕ್ಕೆ ತಿರುಗಿತು. ವಯಸ್ಸಿನ ವ್ಯತ್ಯಾಸದ ಹೊರತಾಗಿಯೂ, ಇಬ್ಬರೂ ಪ್ರೀತಿಸಿ ಮದುವೆಯಾದರು. ಅವರಿಗೆ ಇಬ್ಬರು ಮಕ್ಕಳು ಕೂಡ ಜನಿಸಿದರು. ಆದರೆ, ನಿಜವಾದ ರಹಸ್ಯ ಬೆಳಕಿಗೆ ಬಂದದ್ದು ಇಲ್ಲಿಯೇ. ಯಾವಾಗ ಅಸಲಿ ಸಂಗತಿ ಗೊತ್ತಾಯಿತೋ ಇಬ್ಬರು ಮಾನಸಿಕ ಯಾತನೆ ಸುಳಿಯಲ್ಲಿ ಸಿಲುಕಿದ್ದಾರೆ.
ತಮ್ಮ ಮಗುವಿನ ಭವಿಷ್ಯದ ಬಗ್ಗೆ ಕಾನೂನು ಸಮಾಲೋಚನೆ ನಡೆಸುವಾಗ ದಂಪತಿ ಡಿಎನ್ಎ ಪರೀಕ್ಷೆ ಮಾಡಲು ನಿರ್ಧರಿಸಿದರು. ಈ ವೇಳೆ ಅವರಿಗೆ ಆಘಾತಕಾರಿ ಸಂಗತಿಯೊಂದು ತಿಳಿದುಬಂದಿತು. ಅದೇನೆಂದರೆ, ಡಿಎನ್ಎ ಪರೀಕ್ಷೆ ಪ್ರಕಾರ ಆಕೆ ಮದುವೆಯಾದ ಯುವಕ ಆಕೆಯ ಸ್ವಂತ ಮಗನೆಂಬುದು ಬಹಿರಂಗವಾಯಿತು. ಡಿಎನ್ಎ ಫಲಿತಾಂಶಗಳು ಆತ 36 ವರ್ಷಗಳ ಹಿಂದೆ ತನ್ನ ಮೊದಲ ಪತಿಯಿಂದ ಪಡೆದ ಮಗನೆಂಬುದನ್ನು ಬಹಿರಂಗಪಡಿಸಿದವು.
ಈ ಘಟನೆ ಬಗ್ಗೆ ಮಾತನಾಡಿರುವ ಮಹಿಳೆ, ನಾನು ನನ್ನ ಮಗನನ್ನೇ ಮದುವೆಯಾಗಿ ಎರಡು ಮಕ್ಕಳಿಗೆ ಜನ್ಮ ನೀಡಿದ್ದೇನೆಂದು ತಿಳಿದಾಗ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ನಾನು ತುಂಬಾ ಭಾವುಕಳಾಗಿದ್ದೆ. ನಾನು ಅವನನ್ನು 2015 ರಲ್ಲಿ ಭೇಟಿಯಾದೆ. ಆಗ ಅವನಿಗೆ 21 ವರ್ಷ. ನಾವು 2016 ರಲ್ಲಿ ವಿವಾಹವಾದೆವು. ಪ್ರಸ್ತುತ ನಮಗೆ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ, ಇಬ್ಬರು ಇದೀಗ ಬೇರ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳನ್ನು ಪ್ರಸ್ತುತ ಆ ಮಹಿಳೆಯೇ ನೋಡಿಕೊಳ್ಳುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದ ಸುದ್ದಿಯನ್ನು 6thxwave ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಪ್ರಸ್ತುತ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಆಕೆ ಮಾಡಿದ್ದು ತಪ್ಪಲ್ಲ ಎಂದು ಹೇಳಿದರೆ, ಕೆಲವರು ಮಹಿಳೆಯನ್ನು ಟೀಕಿಸಿ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)