ರಾಷ್ಟ್ರೀಯ ಟೇಬಲ್​ ಟೆನಿಸ್​ ಟೂರ್ನಿಯಲ್ಲಿ​ ಪ್ರಶಸ್ತಿ ಗೆದ್ದ ಕನ್ನಡತಿ ಅರ್ಚನಾ ಕಾಮತ್​

archana kamath web
Published on

ಬೆಂಗಳೂರು: ಕರ್ನಾಟಕದ ಆಟಗಾರ್ತಿ ಅರ್ಚನಾ ಕಾಮತ್​ ವಡೋದರದಲ್ಲಿ ನಡೆದ ರಾಷ್ಟ್ರೀಯ ರ್ಯಾಂಕಿಂಗ್​ ಟೇಬಲ್​ ಟೆನಿಸ್​ ಚಾಂಪಿಯನ್​ಷಿಪ್​ನಲ್ಲಿ ಮಹಿಳಾ ಸಿಂಗಲ್ಸ್​ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪಿಎಸ್​ಪಿಬಿ ಪ್ರತಿನಿಧಿಸಿದ ಅರ್ಚನಾ ಶುಕ್ರವಾರ ನಡೆದ ಫೈನಲ್​ ಪಂದ್ಯದಲ್ಲಿ ಆರ್​ಬಿಐ ತಂಡದ ಐಹಿಕಾ ಮುಖರ್ಜಿ ವಿರುದ್ಧ 4-0ಯಿಂದ ಗೆದ್ದರು. ಇದಕ್ಕೆ ಮುನ್ನ ಸೆಮೀಸ್​ನಲ್ಲಿ ತಮಿಳುನಾಡಿನ ಕಾವ್ಯಶ್ರೀ ಭಾಸ್ಕರ್​ ಮತ್ತು ಕ್ವಾರ್ಟರ್​ಫೈನಲ್​ನಲ್ಲಿ ಅಗ್ರ ಶ್ರೇಯಾಂಕಿತೆ ಶ್ರೀಜಾ ಅಕುಲಾ ಎದುರು ಗೆಲುವು ಸಾಧಿಸಿದ್ದರು.

ಅರ್ಚನಾ ಕಾಮತ್​ ಇತ್ತೀಚೆಗೆ ಗೋವಾದಲ್ಲಿ ನಡೆದ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net