More

    ಟೀಮ್​ ಇಂಡಿಯಾ ಕೋಚ್​ ಹುದ್ದೆಯಿಂದ ದ್ರಾವಿಡ್​ ನಿರ್ಗಮನ, ಲಕ್ಷ್ಮಣ್​ ಆಗಮನ?

    ನವದೆಹಲಿ: ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿ ರಾಹುಲ್​ ದ್ರಾವಿಡ್​ ಅವರ 2 ವರ್ಷಗಳ ಅವಧಿ ಏಕದಿನ ವಿಶ್ವಕಪ್​ ಟೂರ್ನಿಯೊಂದಿಗೆ ಕೊನೆಗೊಂಡಿದೆ. ಅವರು ಇನ್ನು ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಣಿಸಿದ್ದು, ಎನ್​ಸಿಎ ಮುಖ್ಯಸ್ಥ ವಿವಿಎಸ್​ ಲಕ್ಷ್ಮಣ್​ ಉತ್ತರಾಧಿಕಾರಿಯಾಗಿ ನೇಮಕಗೊಳ್ಳುವ ನಿರೀಕ್ಷೆ ಹೆಚ್ಚಾಗಿದೆ.

    ರವಿಶಾಸ್ತ್ರಿ ಅವಧಿ ಮುಕ್ತಾಯಗೊಂಡ ಬಳಿಕ 2021ರ ನವೆಂಬರ್​ನಲ್ಲಿ ದ್ರಾವಿಡ್​ ಕೋಚ್​ ಹುದ್ದೆ ಅಲಂಕರಿಸಿದ್ದರು. ತವರಿನ ದ್ವಿಪಯ ಸರಣಿಗಳಲ್ಲಿ ಟೀಮ್​ ಇಂಡಿಯಾದ ಪ್ರಾಬಲ್ಯ ಮುಂದುವರಿಸುವಲ್ಲಿ ಅವರು ಯಶಸ್ವಿಯಾದರೂ, ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಬರ ಮುಂದುವರಿದಿದೆ. 2022ರ ಟಿ20 ವಿಶ್ವಕಪ್​, 2023ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಭಾರತ ನಿರಾಸೆ ಅನುಭವಿಸಿತ್ತು. ಆದರೆ ತವರಿನ ಏಕದಿನ ವಿಶ್ವಕಪ್​ನಲ್ಲಿ ಪ್ರಶಸ್ತಿ ಗೆಲುವೊಂದನ್ನು ಬಿಟ್ಟು ಟೂರ್ನಿಯುದ್ದಕ್ಕೂ ಅಜೇಯ ಸಾಧನೆ ಮಾಡಿದ್ದರಿಂದ ದ್ರಾವಿಡ್​ರನ್ನು ಮುಂದುವರಿಸಲು ಬಿಸಿಸಿಐ ಒಲವು ತೋರಿದ್ದರೂ, ಅವರು ಸಮ್ಮತಿಸಿಲ್ಲ ಎನ್ನಲಾಗಿದೆ. ಹೀಗಾಗಿ ಬೆಂಗಳೂರಿನ ಎನ್​ಸಿಎಗೆ ದ್ರಾವಿಡ್​ ಮರಳುವ ಸಾಧ್ಯತೆಗಳಿವೆ. ಜತೆಗೆ ಐಪಿಎಲ್​ ತಂಡವೊಂದರ ಕೋಚ್​ ಆಗಿಯೂ ಕಾರ್ಯನಿರ್ವಹಿಸಲು ದ್ರಾವಿಡ್​ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

    ಈಗಾಗಲೆ ದ್ರಾವಿಡ್​ ಗೈರಿನಲ್ಲಿ ಹಂಗಾಮಿ ಕೋಚ್​ ಆಗಿ ಕಾರ್ಯನಿರ್ವಹಿಸುತ್ತ ಬಂದಿರುವ ಲಕ್ಷ್ಮಣ್​, ಪೂರ್ಣಪ್ರಮಾಣದಲ್ಲಿ ಹುದ್ದೆ ಅಲಂಕರಿಸುವ ಸಾಧ್ಯತೆ ಹೆಚ್ಚಿದೆ. ವಿಶ್ವಕಪ್​ ಬೆನ್ನಲ್ಲೇ ನಡೆಯುತ್ತಿರುವ ಆಸೀಸ್​ ವಿರುದ್ಧದ ಹಾಲಿ ಟಿ20 ಸರಣಿಯಲ್ಲೂ ಲಕ್ಷ್ಮಣ್​ ಅವರೇ ಕೋಚ್​ ಆಗಿದ್ದಾರೆ.

    “ಲಕ್ಷ್ಮಣ್​ ಕೋಚ್​ ಆಗಲು ಆಸಕ್ತಿ ತೋರಿದ್ದು, ವಿಶ್ವಕಪ್​ ವೇಳೆ ಅಹಮದಾಬಾದ್​ಗೆ ತೆರಳಿ ಬಿಸಿಸಿಐ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಡಿಸೆಂಬರ್​ 10ರಿಂದ ನಡೆಯಲಿರುವ ದಕ್ಷಿಣ ಆಫ್ರಿಕಾದಿಂದ ಲಕ್ಷ್ಮಣ್​ ಪೂರ್ಣಪ್ರಮಾಣದ ಕೋಚ್​ ಆಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಕೋಚ್​ ಆಗಿ ದ್ರಾವಿಡ್​ ನಿರ್ವಹಣೆ
    ಯಶಸ್ಸು: ಐಸಿಸಿ ರ್ಯಾಂಕಿಂಗ್​ನಲ್ಲಿ ಟೆಸ್ಟ್​, ಏಕದಿನ, ಟಿ20ಯಲ್ಲಿ ಏಕಕಾಲದಲ್ಲಿ ನಂ. 1 ಪಟ್ಟಕ್ಕೇರಿದ ಸಾಧನೆ; ವರ್ಷಾರಂಭದಲ್ಲಿ ಆಸ್ಟ್ರೆಲಿಯಾ ಎದುರು ತವರಿನ ಟೆಸ್ಟ್​ ಸರಣಿಯಲ್ಲಿ ಜಯ, ಬಾರ್ಡರ್​-ಗಾವಸ್ಕರ್​ ಟ್ರೋಫಿ ಉಳಿಸಿಕೊಂಡ ಸಾಧನೆ; ಯುವ ಆರಂಭಿಕ ಶುಭಮಾನ್​ ಗಿಲ್​ ರನ್​ಪ್ರವಾಹ; ವಿರಾಟ್​ ಕೊಹ್ಲಿ ಹಿಂದಿನ ಲಯಕ್ಕೆ ವಾಪಸ್​; ಏಷ್ಯಾಕಪ್​ ಗೆಲುವಿನ ಸಾಧನೆ; ಏಕದಿನ ವಿಶ್ವಕಪ್​ಗೆ ರೂಪಿಸಿದ ಯೋಜನೆ ಯಶಸ್ಸು, ಸತತ 10 ಜಯದ ದಾಖಲೆ.
    ವೈಫಲ್ಯ: ದಣ ಆಫ್ರಿಕಾ ಪ್ರವಾಸದ ಟೆಸ್ಟ್​ ಸರಣಿಯಲ್ಲಿ 1&0 ಮುನ್ನಡೆ ಸಾಧಿಸಿದ ಬಳಿಕ ಸರಣಿ ಸೋಲು; 2022ರ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಹೀನಾಯ ಸೋಲು; ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ನಲ್ಲಿ ಆಸ್ಟ್ರೆಲಿಯಾ ಎದುರು ಸೋಲು; ಅಜೇಯ ಸಾಧನೆಯ ಬಳಿಕ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಪರಾಭವ.

    ಟಿ20ಗೆ ರೋಹಿತ್​ ಶರ್ಮ ಗುಡ್​ಬೈ? ಇನ್ನು ಏಕದಿನ-ಟೆಸ್ಟ್​ ಕ್ರಿಕೆಟ್​ನತ್ತ ಗಮನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts