ಲಂಡನ್​ನ ಬೀದಿಯಲ್ಲಿ ಪತ್ನಿ-ಮಗನೊಂದಿಗೆ ವಿರಾಟ್​ ಶಾಪಿಂಗ್​; ವಿಡಿಯೋ ವೈರಲ್

Virushka
Published on

ಲಂಡನ್: ಈಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಕಪ್​ನಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಆಗಿದ್ದು, ತಂಡಕ್ಕೆ ಕಪ್​ ಗೆಲ್ಲಿಸಿಕೊಟ್ಟ ಬಳಿಕ ವಿರಾಟ್​ ಕೊಹ್ಲಿ ಕುಟುಂಬದೊಂದಿಗೆ ಸಮಯ ಕಳೆಯಲು ಲಂಡನ್​ಗೆ ಹಾರಿದ್ದರು. ಮಾಧ್ಯಮಗಳಿಂದ ಹೆಚ್ಚು ಅಂತರ ಕಾಯ್ದುಕೊಳ್ಲಲು ಇಷ್ಟಪಡುವ ವಿರಾಟ್​ ದಂಪತಿ ಆಗಿಂದಗೆ ಅಭಿಮಾನಿಗಳ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಿರುತ್ತಾರೆ. ಇದೀಗ ಲಂಡನ್​ನ ಬೀದಿಬದಿ ವಿರಾಟ್​ ದಂಪತಿ ಮಕ್ಕಳೊಂದಿಗೆ ಶಾಪಿಂಗ್​ ಮಾಡುತ್ತಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ವಿರಾಟ್ ತಮ್ಮ ಮಗ ಅಕಾಯ್ ಜೊತೆ ಹೂವಿನ ಅಂಗಡಿಯೊಂದರ ಬಳಿ ನಿಂತಿದ್ದಾರೆ. ಅವರ ಪಕ್ಕದಲ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ. ವಿರಾಟ್ ತನ್ನ ಮಗನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಇದೇ ಮೊದಲು.

ಕೆಲ ದಿನಗಳ ಹಿಂದೆ ನಡೆದ ರಾಧಿಕಾ ಮರ್ಚೆಂಟ್​ ಹಾಗೂ ಅನಂತ್​ ಅಂಬಾನಿ ವಿವಾಹ ಮಹೋತ್ಸವದಲ್ಲಿ ವಿರಾಟ್​ ಹಾಗೂ ಅನುಷ್ಕಾ ಕಾಣಿಸಿಕೊಂಡಿರಲಿಲ್ಲ. ಅಂದಿನ ದಿನ ಇವರಿಬ್ಬರು ಲಂಡನ್​ನ ಇಸ್ಕಾನ್ ಟೆಂಪಲ್‌ನಲ್ಲಿ ನಡೆದ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ತಿಂಗಳಾಂತ್ಯದಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ವಿರಾಟ್​ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಅಕಾಯ್ 15 ಫೆಬ್ರವರಿ 2024 ರಂದು ಲಂಡನ್‌ನಲ್ಲಿ ಜನಿಸಿದರು. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಕುಟುಂಬದೊಂದಿಗೆ ಲಂಡನ್​ನಲ್ಲಿದ್ದರು. ಆ ಬಳಿಕ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡಿದ್ದರು. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net