

ಕೇಪ್ ಟೌನ್: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಪೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಪತಿಯ ಆಟಕ್ಕೆ ಪ್ರೋತ್ಸಾಹ ನೀಡಲು ದಕ್ಷಿಣ ಆಫ್ರಿಕಾಗೆ ಬರಲಿದ್ದಾರಾ? ಎಂದು ಕೆಲವರು ನಿರೀಕ್ಷಿಸಿದರೆ, ಇನ್ನು ಕೆಲವರು ಅವರು ಬರುವುದು ಬಹುತೇಕ ಡೌಟ್ ಎಂದು ಊಹಿಸಿದ್ದರು. ಆದ್ರೆ, ಇದೀಗ ಮುಂಬರುವ ಸೌತ್ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪತಿಗೆ ಪ್ರೋತ್ಸಾಹಿಸಲು ಕೇಪ್ಟೌನ್ಗೆ ಬಂದಿಳಿದಿದ್ದಾರೆ.
ದಕ್ಷಿಣ ಆಫ್ರಿಕಾಗೆ ಬಂದಿಳಿದಿರುವ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿವೆ. ಕೇಪ್ ಟೌನ್ನ ನ್ಯೂಲ್ಯಾಂಡ್ಸ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ನಲ್ಲಿ ಪತಿಯ ಆಟವನ್ನು ವೀಕ್ಷಿಸುವ ಮೂಲಕ ವಿರಾಟ್ಗೆ ಬೆಂಬಿಲಿಸಲು ಅನುಷ್ಕಾ ಆಗಮಿಸಿದ್ದಾರೆ.
2023ರ ವಿಶ್ವಕಪ್ನಲ್ಲಿ ಫೈನಲ್ ಮತ್ತು ಸೆಮಿಫೈನಲ್ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ಶರ್ಮಾ, ಸ್ಟೇಡಿಯಂನಲ್ಲಿ ಕುಳಿತು ಪ್ರೋತ್ಸಾಹಿಸುವ ಮುಖೇನ ಪತಿ ವಿರಾಟ್ಗೆ ಪ್ರತಿ ಹಂತದಲ್ಲೂ ಸಾಥ್ ನೀಡಿದ್ದಾರೆ. ಇಂದು ಬೆಳಗ್ಗೆ ದಕ್ಷಿಣ ಆಫ್ರಿಕಾದ ಬಿಗ್ ಮೌತ್ ರೆಸ್ಟೋರೆಂಟ್ನಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಂಡ ಫೋಟೋ ಸದ್ಯ ಜಾಲತಾಣದಲ್ಲಿ ಹರಿದಾಡಿದೆ,(ಏಜೆನ್ಸೀಸ್).