ಕುಸ್ತಿಪಟು ಸಾಗರ್​ ಧನಕರ್​​ ಕೊಲೆ : ಮತ್ತೊಬ್ಬ ಆಟಗಾರನ ಬಂಧನ

sagar
Published on

ನವದೆಹಲಿ : ಕುಸ್ತಿಪಟು ಸಾಗರ್​ ಧನ್​ಕರ್​ ಕೊಲೆ ಪ್ರಕರಣದಲ್ಲಿ ದೆಹಲಿ ಅಪರಾಧ ವಿಭಾಗ ಪೊಲೀಸರು ಮತ್ತೊಬ್ಬ ಕುಸ್ತಿ ಆಟಗಾರನನ್ನು ಬಂಧಿಸಿದ್ದಾರೆ. ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್​ ಪ್ರಮುಖ ಆರೋಪಿಯಾಗಿರುವ ಈ ಪ್ರಕರಣದಲ್ಲಿ ಈವರೆಗೆ 10 ಜನರನ್ನು ಬಂಧಿಸಲಾಗಿದೆ.

ದೆಹಲಿ ನಿವಾಸಿ ಅನಿರುದ್ಧ್ ಎಂಬುವ ಬಂಧಿತನಾಗಿದ್ದು, ಸುಶೀಲ್​ಕುಮಾರ್​ ಹೇಳಿದಂತೆ ಮೃತ ಸಾಗರ್​ ಧನಕರ್​ಅನ್ನು ಥಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಾಜಿ ಜೂನಿಯರ್​ ಚಾಂಪಿಯನ್​ ಆಗಿದ್ದ ಧನಕರ್​ನನ್ನು ಮೇ 5 ರಂದು ಛತ್ರಸಾಲ್​ ಕ್ರೀಡಾಂಗಣದಲ್ಲಿ ಸುಶೀಲ್​ ಕುಮಾರ್​ ಮತ್ತು ಸಹಚರರು ಗುಂಪಾಗಿ ಹೊಡೆದು ಸಾಯಿಸಿದ್ದರೆಂದು ಆರೋಪಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net