ಬಾಕ್ಸಿಂಗ್​ನಲ್ಲಿ ಕನ್ನಡತಿ ಅನನ್ಯಾಗೆ ಸ್ವರ್ಣ ಪದಕ

ananaya web
Published on

ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಬಾಕ್ಸರ್​ ಅನನ್ಯಾ ಬೆಂಗಳೂರಿನ ಎಸ್​ಜೆಒಎನ್​ ರಾಷ್ಟ್ರೀಯ ಯೂತ್​ ಟ್ರೇನಿಂಗ್​ ಸೆಂಟರ್​ನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ರೆಕ್​ ಓಪನ್​ ಸದರ್ನ್​ ಟ್ಯಾಲೆಂಡ್​ ಹಂಟ್​ ಬಾಕ್ಸಿಂಗ್​ ಚಾಂಪಿಯನ್​ಷಿಪ್​ನಲ್ಲಿ ಸಬ್​ಜೂನಿಯರ್​ ಬಾಲಕಿಯರ 58-61 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.

ಅನನ್ಯಾ ಕಳೆದ ಡಿಸೆಂಬರ್​ನಲ್ಲಿ ಕರ್ನಾಟಕ ರಾಜ್ಯ ಮಟ್ಟದ ಬಾಕ್ಸಿಂಗ್​ ಸ್ಪರ್ಧೆಯಲ್ಲೂ ಚಿನ್ನ ಗೆದ್ದಿದ್ದರು. ಅನನ್ಯಾ ಅವರ ಹಿರಿಯ ಸಹೋದರಿ ಅಮೂಲ್ಯ ಕೂಡ ರಾಷ್ಟ್ರಮಟ್ಟದ ಬಾಕ್ಸರ್​ ಆಗಿದ್ದು, ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಖೇಲೋ ಇಂಡಿಯಾ ಯೂತ್​ ಗೇಮ್ಸ್​ನಲ್ಲಿ ರಜತ ಪದಕ ಗೆದ್ದುಕೊಂಡಿದ್ದರು. ಇವರಿಬ್ಬರು ಮಹೇಂದ್ರ ಜಿ.-ರಮ್ಯಾ ಕೆ. ದಂಪತಿಯ ಪುತ್ರಿಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net